ಬಾಲಕಿಯನ್ನು ಅಪಹರಿಸಿ ಗ್ಯಾಂಗ್‍ರೇಪ್- ಸೇತುವೆಯಿಂದ ಕೆಳಗೆಸೆದ ಪಾಪಿಗಳು…

53
firstsuddi

ಭೋಪಾಲ್: ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಸೇತುವೆಯಿಂದ ಕೆಳಗೆಸೆದಿರುವ ಅಮಾನವೀಯ ಪ್ರಕರಣ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಡೆದಿದೆ.

ಜ.29ರಂದು ಈ ಘಟನೆ ನಡೆದಿದೆ. ಆರೋಪಿಗಳು ಬಾಲಕಿಯನ್ನು ಅಪಹರಿಸಿ, ದಾಬ್ರಾದ ಸಹರಾಯ್ ಸೇತುವೆಯ ಬಳಿ ಕರೆದೊಯ್ದು ಅಮಾನುಷವಾಗಿ ಹಲ್ಲೆ ನಡೆಸಿ ಸಾಮೂಹಿಕ ಅತ್ಯಾಚಾರ ಎಸೆದಿದ್ದಾರೆ ಮತ್ತು ಸೇತುವೆಯಿಂದ ಎಸೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಸೋಮವಾರ ಮಧ್ಯಾಹ್ನ 10 ನೇ ತರಗತಿಯ ವಿದ್ಯಾರ್ಥಿನಿ ಕೋಚಿಂಗ್ ತರಗತಿಗಳಿಗೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಆಕೆ ಒಂಟಿಯಾಗಿ ನಡೆದುಕೊಂಡು ಹೋಗುತ್ತಿರುವುದನ್ನು ಇಬ್ಬರು ಹಿಂಬಾಲಿಸಿ ಆಕೆಯನ್ನು ಅಪಹರಿಸಿ ದಾಬ್ರಾದ ಸಹರಾಯ್ ಸೇತುವೆಯ ಬಳಿ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ. ಆಕೆಯ ಮೇಲೆ ಅತ್ಯಾಚಾರವೆಸಗಿ ಕ್ರೂರವಾಗಿ ಥಳಿಸಿದ್ದಾರೆ. ಬಳಿಕ ಸಹರಾಯ್ ಸೇತುವೆಯಿಂದ ತಳ್ಳಿದ್ದಾರೆ. ಸ್ಥಳೀಯ ನಿವಾಸಿಗಳು ಆಕೆಯು ಪ್ರಜ್ಞಾಹೀನಳಾಗಿ ಬಿದ್ದಿರುವುದನ್ನು ಕಂಡು ತಕ್ಷಣ ಆಸ್ಪತ್ರೆಗೆ ಸೇರಿಸಿ ಕುಟುಂಬದವರಿಗೆ ವಿಷಯ ತಲುಪಿಸಿದ್ದಾರೆ.

ಪಕ್ಕೆಲುಬುಗಳು ಮುರಿದಿವೆ, ಖಾಸಗಿ ಭಾಗಗಳಲ್ಲೂ ಗಾಯಗಳಾಗಿವೆ. ಆಕೆಯ ಪರಿಸ್ಥಿತಿ ಸ್ಥಿರವಾಗಿದೆ ಎಂಬುದು ತಿಳಿದುಬಂದಿದೆ. ಪ್ರಜ್ಞೆ ಬಂದ ನಂತರ ಆಕೆಯ ಬಳಿ ಪೊಲೀಸರು ಮಾಹಿತಿ ಪಡೆದಿದ್ದಾರೆ.

ಆರೋಪಿಗಳ ಗುರುತು ಪತ್ತೆಯಾಗಿದ್ದು, ತಲೆಮರೆಸಿಕೊಂಡ ಆರೋಪಿಗಳನ್ನು ಬಂಧಿಸಲು ವಿಶೇಷ ಘಟಕವನ್ನು ರಚಿಸಲಾಗಿದೆ. ಸೆಕ್ಷನ್ 376(ಡಿ), 366 (ಅಪಹರಣ) ಮತ್ತು 323 ಅಡಿ ಪ್ರಕರಣ ದಾಖಲಿಸಲಾಗಿದೆ. ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿದೆ.