ಬಿಎಂಟಿಸಿ ಪ್ರಯಾಣಿಕರಿಗೆ ಸಿಹಿಸುದ್ದಿ – ಸ್ವಾತಂತ್ರ್ಯ ದಿನದಂದು ಉಚಿತ ಪ್ರಯಾಣ…

62
firstsuddi

ಬೆಂಗಳೂರು : 75ನೇ ಸ್ವತಂತ್ರ ಭಾರತದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಇಡೀ ದಿನ ಬೆಂಗಳೂರಿನಾದ್ಯಂತ ಪ್ರಯಾಣಿಕರು ವೋಲ್ವೋ ಬಸ್ ಸೇರಿದಂತೆ ಬಿಎಂಟಿಸಿಯ ಎಲ್ಲಾ ಬಸ್ ಗಳಲ್ಲೂ ಉಚಿತವಾಗಿ ಪ್ರಯಾಣಿಸಲು ಬಿಎಂಟಿಸಿ ಅವಕಾಶ ನೀಡಿದೆ.

ಆಗಸ್ಟ್ 15ರಂದು 24 ಗಂಟೆಗಳ ಕಾಲ ವೋಲ್ವೋ ಸೇರಿ ಎಲ್ಲಾ ಬಿಎಂಟಿಸಿ ಬಸ್ ನಲ್ಲೂ ಉಚಿತ ಪ್ರಯಾಣ ಸೌಲಭ್ಯ ನೀಡಿದ್ದು, ಇದರಿಂದ ಬಿಎಂಟಿಸಿಗೆ 3 ಕೋಟಿ ಹೊರೆ ಬೀಳಲಿದೆ. ಉಚಿತ ಪ್ರಯಾಣಕ್ಕೆ ಅನುಮತಿ ನೀಡುವಂತೆ ಬಿಎಂಟಿಸಿ ಎಂಡಿ ಸರ್ಕಾರದ ಅನುಮೋದನೆ ಕೋರಿದ್ದರು. ಇದೀಗ ಸರ್ಕಾರ ಒಪ್ಪಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಬಿಎಂಟಿಸಿ ಅಧಿಕೃತವಾಗಿ ಘೋಷಣೆ ಮಾಡಿದೆ.