ಬಿಜೆಪಿ ಮುಖಂಡನನ್ನು ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು.

70
firstsuddi

ಜೈಪುರ: ಬಿಜೆಪಿ ಮುಖಂಡರೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ರಾಜಸ್ಥಾನದ ಭರತ್ ಪುರದಲ್ಲಿ ನಡೆದಿದೆ. ಕೃಪಾಲ್ ಸಿಂಗ್ ಮೃತ ವ್ಯಕ್ತಿ. ಸರ್ಕ್ಯೂಟ್ ಹೌಸ್ ನಿಂದ ಮನೆಗೆ ಹೋಗುತ್ತಿದ್ದ ಕೃಪಾಲ್ ಸಿಂಗ್ ಮೇಲೆ 2 ಬೈಕ್ ಹಾಗೂ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ.

ಭರತ್ ಪುರದ ಬಿಜೆಪಿ ಸಂಸದರಾದ ರಂಜಿತಾ ಕೋಲಿ ಅವರ ಆಪ್ತ ಸಹಾಯಕ ಕೃಪಾಲ್ ಸಿಂಗ್ ಮೇಲೆ ಗುಂಡಿನ ದಾಳಿ ನಡೆದಿದ್ದು, 7 ಬಾರಿ ಗುಂಡು ಹಾರಿಸಲಾಗಿದೆ. ಆರೋಪಿಗಳನ್ನು ಗುರುತಿಸಲಾಗುತ್ತಿದೆ. ಇದುವರೆಗೆ ಯಾರನ್ನೂ ಬಂಧಿಸಿಲ್ಲ, ಮೃತಪಟ್ಟ ಕೃಪಾಲ್ ಸಿಂಗ್ ಅವರ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಮಥುರಾ ಗೇಟ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಅಧಿಕಾರಿ ರಾಮನಾಥ್ ಸಿಂಗ್ ತಿಳಿಸಿದ್ದಾರೆ. ಹಳೆಯ ವೈಷಮ್ಯದಿಂದ ಈ ಹತ್ಯೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.