ಬಿಜೆಪಿ ಸಂಸದ ತಿರಥ್ ಸಿಂಗ್ ರಾವತ್ ಅವರು ಉತ್ತರಾಖಂಡದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆ!

145
Firstsuddi

ಡೆಹ್ರಾಡೂನ್ : ಬಿಜೆಪಿ ಸಂಸದ ತಿರಥ್ ಸಿಂಗ್ ರಾವತ್ ಅವರು ಉತ್ತರಾಖಂಡದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದು, ಇಂದು ಸಂಜೆ 4 ಗಂಟೆಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ತಿರಥ್ ಸಿಂಗ್ ರಾವತ್ ಅವರು 2013 ರಿಂದ 2015 ರವರೆಗೆ ಉತ್ತರಾಖಂಡದ ಭಾರತೀಯ ಜನತಾ ಪಕ್ಷದ ಮುಖ್ಯಸ್ಥರಾಗಿ ಮತ್ತು 2012 ರಿಂದ 2017 ರವರೆಗೆ ಚೌಬ್ತಖಲ್ ಕ್ಷೇತ್ರದಿಂದ ಉತ್ತರಾಖಂಡ ವಿಧಾನಸಭೆಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.

ನಿನ್ನೆ ಮುಖ್ಯಮಂತ್ರಿ ಸ್ಥಾನಕ್ಕೆ ತ್ರಿವೇಂದ್ರ ಸಿಂಗ್ ರಾವತ್ ಅವರು ರಾಜಿನಾಮೆ ನೀಡಿದ್ದರು. ಬಳಿಕ ಸಾಕಷ್ಟು ಚರ್ಚೆಗಳ ನಂತರ ಅಂತಿಮವಾಗಿ ರಾಜ್ಯ ಬಿಜೆಪಿ ನಾಯಕರ ಜತೆ ಚರ್ಚಿಸಿದ ಹೈಕಮಾಂಡ್ ತಿರಥ್ ಸಿಂಗ್ ರಾವತ್ ಅವರು ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ  ಎಂದು ಘೋಷಣೆ ಮಾಡಿದೆ.