ಆಂಧ್ರಪ್ರದೇಶ : ಬಿಸಿ ಸಾಂಬಾರ್ ಪಾತ್ರೆಗೆ ಬಿದ್ದು ಮಗು ಸಾವನ್ನಪ್ಪಿರುವ ದಾರುಣ ಘಟನೆ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ವಿಸನ್ನಪೇಟೆಯ ದಲಿತವಾಡದಲ್ಲಿ ನಡೆದಿದೆ.
ಫೆಬ್ರವರಿ 13ರಂದು ಈ ಘಟನೆ ನಡೆದಿದೆ. ಶಿವ ಮತ್ತು ಭಾನುಮತ್ ಅವರ ಪುತ್ರಿ ಎರಡು ವರ್ಷದ ತೇಜಸ್ವಿ ತನ್ನ ಹುಟ್ಟುಹಬ್ಬದ ವೇಳೆ ಮನೆಯ ಮುಂದೆ ಆಟವಾಡುತ್ತಿದ್ದಳು. ಈ ವೇಳೆ ಸಾಂಬಾರು ತಯಾರಿಸುತ್ತಿದ್ದ ಸ್ಥಳಕ್ಕೆ ಆಟವಾಡುತ್ತಾ ಬಂದ ತೇಜಸ್ವಿ ಸಾಂಬಾರು ಪಾತ್ರೆಗೆ ಬಿದ್ದಿದ್ದಾಳೆ. ಸ್ಥಳದಲ್ಲಿದ್ದವರು ತೇಜಸ್ವಿಯನ್ನು ಪಾತ್ರೆಯಿಂದ ಮೇಲಕ್ಕೆ ಎತ್ತಿದ್ದಾರೆ.
ತಕ್ಷಣ ತೇಜಸ್ವಿಯನ್ನು ಪೋಷಕರು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ನಂತರ ವೈದ್ಯರ ಶಿಫಾರಸಿನ ಮೇರೆಗೆ ಆಕೆಯನ್ನು ವಿಜಯವಾಡಕ್ಕೆ ಸ್ಥಳಾಂತರಿಸಲಾಯಿತು. ಆದರೆ ಗಂಭೀರವಾಗಿ ಗಾಯಗೊಂಡಿದ್ದ ತೇಜಸ್ವಿ ಸಾವನ್ನಪ್ಪಿದ್ದಾಳೆ.










