ಬೆಂಗಳೂರು : ನಗರದಲ್ಲಿ ಇನ್ಮುಂದೆ ಮಧ್ಯರಾತ್ರಿ 1 ಗಂಟೆ ವರೆಗೂ ಹೋಟೆಲ್ ಗಳು ಓಪನ್ ಇರಲಿವೆ. ಈ ಸಂಬಂಧ ನಗರ ಕಮಿಷನರ್ ಪ್ರತಾಪ್ ರೆಡ್ಡಿ ಅವರು ಆದೇಶ ಹೊರಡಿಸಿದ್ದಾರೆ.
ನಗರದಲ್ಲಿ ಎಲ್ಲಾ ಹೋಟೆಲ್ ಗಳು ರಾತ್ರಿ 1 ಗಂಟೆಯವರೆಗೂ ತೆರೆಯಲು ಹೋಟೆಲ್ ಗಳಿಗೆ ಅನುಮತಿ ನೀಡಲಾಗಿದೆ. ಈ ಸಂಬಂಧ ಹಿಂದಿನ ಆದೇಶ ಪಾಲಿಸುವಂತೆ ಪೊಲೀಸ್ ಕಮೀಷನರ್ ಪ್ರತಾಪ್ ರೆಡ್ಡಿ ಸೂಚಿಸಿದ್ದಾರೆ.
ರಾತ್ರಿ ಸಮಯ ಒಂದು ಗಂಟೆಯ ತನಕ ಕೆಲವು ಕಡೆ ಹೋಟೆಲ್ ಗಳು ಓಪನ್ ಆಗಿರುತ್ತಿತ್ತು. ಆದರೆ ಕೆಲವೆಡೆ ಪೊಲೀಸರೇ ಹೋಟೆಲ್ ಗಳನ್ನು ಬಂದ್ ಮಾಡಿಸ್ತಿದ್ರು. ಆದರೆ ಇದೀಗ ಮತ್ತೆ ಎಲ್ಲಾ ಕಡೆ ಹೋಟೆಲ್ ಗಳನ್ನು ತೆರೆಯಲು ಅನುಮತಿ ನೀಡಲಾಗಿದೆ.










