ಬೆಂಗಳೂರಿನ ಐಟಿ ಕಚೇರಿಗೆ ಬಾಂಬ್ ಸ್ಫೋಟಿಸುವುದಾಗಿ ಇ-ಮೇಲ್ ಮೂಲಕ ಬೆದರಿಕೆ…

210
firstsuddi

ಬೆಂಗಳೂರು : ಆದಾಯ ತೆರಿಗೆ ಕಚೇರಿಗೆ ಬಾಂಬ್ ಇಡುವುದಾಗಿ ಬೆದರಿಕೆ ಹಾಕಲಾಗಿದ್ದು, ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಆದಾಯ ತೆರಿಗೆ ಕಚೇರಿಯಲ್ಲಿ ಬಾಂಬ್ ಇಡುವುದಾಗಿ ನಿನ್ನೆ ರಾತ್ರಿ ಇ-ಮೇಲ್ ಮುಖಾಂತರ ಬೆದರಿಕೆ ಹಾಕಲಾಗಿದೆ. ಇದರಿಂದ ಕೂಡಲೇ ಎಚ್ಚೆತ್ತುಕೊಂಡ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದು, ಮುಂಜಾಗ್ರತ ಕ್ರಮವಾಗಿ ಪೊಲೀಸರು ಐಟಿ ಕಚೇರಿಯಲ್ಲಿ ಇದ್ದ ಸಿಬ್ಬಂದಿಗಳನ್ನು ಹೊರಗೆ ಕಳುಹಿಸಿ ತಪಾಸಣೆ ನಡೆಸಿದ್ದಾರೆ. ಅಲ್ಲದೇ ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನ ದಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬೆದರಿಕೆ ಬಂದಿದ್ದ ಇ-ಮೇಲ್ ವಿಳಾಸವನ್ನು ಕಳುಹಿಸಿದ ವ್ಯಕ್ತಿ ಯಾರು? ಎಂಬ ಮಾಹಿತಿಯನ್ನು ಸೈಬರ್ ಕ್ರೈಂ ಪೊಲೀಸರು ಸಂಗ್ರಹಿಸುತ್ತಿದ್ದಾರೆ. ಆದಾಯ ತೆರಿಗೆ ಕಚೇರಿಯ ಸುತ್ತ ಮುತ್ತ ಸ್ಥಳೀಯ ಪೊಲೀಸರಲ್ಲದೇ ಕೇಂದ್ರದ ಕೈಗಾರಿಕಾ ಭದ್ರತಾ ಪಡೆ ಕೂಡಾ ಭದ್ರತೆ ಒದಗಿಸಿದೆ.