ಬೆಂಗಳೂರಿನ ಖಾಸಗಿ ಅಪಾರ್ಟ್‍ಮೆಂಟ್‍ನ 103 ಜನರಿಗೆ ಕೊರೊನಾ ಪಾಸಿಟಿವ್…

141
First Suddi

ಬೆಂಗಳೂರು : ಬೊಮ್ಮನಹಳ್ಳಿಯ ಎಸ್ಎನ್ಎನ್ ರಾಜ್ ಲೇಕ್ ವ್ಯೂ ಅಪಾರ್ಟ್‍ಮೆಂಟ್ ನಲ್ಲಿ ಒಟ್ಟು 103 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಅಪಾರ್ಟ್‍ಮೆಂಟ್ ನಲ್ಲಿ ಸುಮಾರು 1500 ಮಂದಿ ವಾಸವಾಗಿದ್ದಾರೆ. ಇದರಲ್ಲಿ ಕೆಲವರು ಫೆ.6ರಂದು ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಕೊರೊನಾ ಹೆಚ್ಚು ಜನರಿಗೆ ಹಬ್ಬಿದ್ದು, ಈ ಪೈಕಿ 50 ವರ್ಷ ಮೇಲ್ಪಟ್ಟ 96 ಜನರಲ್ಲಿ ಪಾಸಿಟಿವ್ ಕಂಡು ಬಂದಿದೆ. ಜೊತೆಗೆ ಡಯಾಬಿಟಿಕ್ ಇರುವವರು 43 ಮಂದಿ ಇದ್ದಾರೆ ಎನ್ನಲಾಗಿದೆ.
ನಿನ್ನೆ 36 ಜನರಿಗೆ ಇಂದು 67 ಜನರಲ್ಲಿ ಪಾಸಿಟಿವ್ ದೃಢಪಟ್ಟಿದೆ ಎಂದು ಆರೋಗ್ಯಾಧಿಕಾರಿ ಸುರೇಶ್ ಕುಮಾರ್ ಅವರು ತಿಳಿಸಿದ್ದಾರೆ. ಉಳಿದವರಿಗೆ ಕೋವಿಡ್ ಪರೀಕ್ಷೆ ಮುಂದುವರೆದಿದ್ದು, ಹದಿನಾಲ್ಕು ದಿನಗಳ ಕಾಲ ಅಪಾರ್ಟ್‍ಮೆಂಟ್ ನಿವಾಸಿಗಳಿಗೆ ಕ್ವಾರಂಟೈನ್‍ನಲ್ಲಿರುವಂತೆ ಸೂಚಿಸಲಾಗಿದೆ.