ಬೆಂಗಳೂರಿನ ಬಸ್ ನಿಲ್ದಾಣದಲ್ಲಿ ಮೂಡಿಗೆರೆಯ ನಾಮಫಲಕವಿಲ್ಲದೇ ಪ್ರಯಾಣಿಕರ ಪರದಾಟ! ಸಾರ್ವಜನಿಕರ ಆರೋಪ…

1290
firstsuddi

ಮೂಡಿಗೆರೆ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬೆಂಗಳೂರು ಮೆಜೆಸ್ಟಿಕ್ ಸರ್ಕಾರಿ ಬಸ್ ನಿಲ್ದಾಣದಲ್ಲಿ ಮೂಡಿಗೆರೆಗೆ ಬರುವ ಬಸ್ಸುಗಳಿಗೆ ಪ್ಲಾಟ್ ಪಾರಂ ವ್ಯವಸ್ಥೆ ಹಾಗೂ ನಾಮಫಲಕ ಇಲ್ಲದೇ ಮೂಡಿಗೆರೆಗೆ ಬರಲು ಪ್ರಯಾಣಿಕರು ಪರಿತಪಿಸುತ್ತಿದ್ದಾರೆ.
ಮೂಡಿಗೆರೆ ಹೆಸರಿಗೆ ಹಳ್ಳಿಯಿಂದ ದಿಲ್ಲಿಯವರೆಗೂ ಹಲವು ಜನಪ್ರಿಯ ಶಾಸಕರು ಸಂಸದರು ಇಲ್ಲಿಂದ ಆಯ್ಕೆಯಾಗಿದ್ದು, ಅವರು ಸಹ ಇಲ್ಲಿನ ಹೆಸರನ್ನು ರಾಜ್ಯ ಹಾಗೂ ರಾಷ್ಟ್ರ ಮಟ್ಟಕ್ಕೆ ತಲುಪಿಸುವಲ್ಲಿ ಗಣನೀಯವಾಗಿ ಕೆಲಸ ಮಾಡಿದ್ದಾರೆ. ಅದರಲ್ಲಿ ಮಹಿಳಾ ಮಂತ್ರಿಯಾಗಿ ಮೋಟಮ್ಮ ಅವರು ಹಲವು ವರ್ಷಗಳಿಂದಲೂ ಅಧಿಕಾರವನ್ನು ನಡೆಸಿ ಮೂಡಿಗೆರೆ ತಾಲ್ಲೂಕನ್ನು ಇಡೀ ರಾಜ್ಯಾದ್ಯಂತ ಗಮನ ಸೆಳೆಯುವಂತೆ ಮಾಡಿದ್ದು, ಅದಲ್ಲದೇ ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿಯವರು ಸಹ ತಾಲ್ಲೂಕಿನ ದಾರದಹಳ್ಳಿಗೆ ಬಂದು ತಂಗಿರುವ ನಿರ್ದೇಶನವಿದೆ.

ಇಲ್ಲಿ ಪ್ರಮುಖ ಘಟಾನುಘಟಿ ನಾಯಕರಾದ ಡಿ.ಬಿ.ಚಂದ್ರೇಗೌಡ, ಬಿ.ಎಲ್.ಶಂಕರ್, ಡಿ.ಕೆ. ತಾರಾದೇವಿ ಹಾಗೂ ಬಿ.ಬಿ.ನಿಂಗಯ್ಯ, ಶಾಸಕ ಎಂ.ಪಿ. ಕುಮಾರಸ್ವಾಮಿ ಹಾಗೂ ವಿಧಾನ ಪರಿಷತ್ ಸದಸ್ಯರಾದ ಎಂ.ಕೆ ಪ್ರಾಣೇಶ್ ಸೇರಿದಂತೆ ಹಲವು ರಾಜಕಾರಣಿಗಳನ್ನು ಕೊಡುಗೆ ಕೊಟ್ಟ ಮೂಡಿಗೆರೆಗೆ ಇಂತಹ ಪರಿಸ್ಥಿತಿ ಬರಬರಾದಿತ್ತು. ಇದುವೇ ನಮ್ಮ ಮೂಡಿಗೆರೆಯ ದೊಡ್ಡ ದುರಂತ ಎಂದು ಇಲ್ಲಿನ ನಾಗರಿಕರ ಆಕ್ರೋಶವಾಗಿದೆ.
ಇಲ್ಲಿಗೆ ಪ್ರಯಾಣಿಕರು ವಿವಿದ ಕಡೆಗಳಿಂದ ದಿನನಿತ್ಯ ಆಗಮಿಸುತ್ತಿದ್ದು.  ತಮ್ಮ ಸ್ವಂತ ವಾಹನದಲ್ಲಿ ಬರುವವರು ಕೆಲವರಾದರೆ ಸರ್ಕಾರಿ ಬಸ್ಸನ್ನು ಬಳಸಿಕೊಂಡು ತಮ್ಮ ವಿವಿದ ಕೆಲಸಗಳಿಗೆ ಹಾಗೂ ಪ್ರವಾಸಕ್ಕಾಗಿ ಬರುವುದಕ್ಕೆ ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಬಂದರೆ ಇಲ್ಲಿ ಅವರು ಕಂಗಾಲಾಗುವುದು ಸಹಜವಾಗಿದೆ. ಅದಕ್ಕೆ ಪೂರಕವೆಂಬಂತೆ ಇಲ್ಲಿನ ಪ್ಲಾಟ್ ಫಾರಂಗಳಲ್ಲಿ ಮೂಡಿಗೆರೆಯ ನಾಮಫಲಕವನ್ನು ಅಳವಡಿಸದೆ ಅದರ ಅಕ್ಕ ಪಕ್ಕದಲ್ಲಿರುವ ಊರುಗಳ ಹೆಸರುಗಳು ಗೋಚರಿಸುತ್ತಿದ್ದರೂ ಮೂಡಿಗೆರೆ ನಾಮಫಲಕ ಹಾಗೂ ಇಲ್ಲಿಗೆ ನಿಗದಿ ಪಡಿಸಿದ ಪ್ಲಾಟ್ ಫಾರಂ ಇಲ್ಲದೇ ಕರ್ನಾಟಕ ರಾಜ್ಯ ರಸ್ಥೆ ಸಾರಿಗೆ ಸಂಸ್ಥೆ ಅಧಿಕಾರಿಗಳು ದ್ರೋಹ ಬಗೆದಿದ್ದಾರೆ ಎಂದು ಪ್ರಯಾಣಿಕರು ಫಸ್ಟ್ ಸುದ್ದಿಯೊಂದಿಗೆ ಅಳಲನ್ನು ತೋಡಿಕೊಂಡಿದ್ದಾರೆ.
ಕೇವಲ ಹೆಸರಿಗೆ ಮಾತ್ರ ಇಲ್ಲಿಗೆ ಹಲವು ಘಟಾನುಘಟಿ ರಾಜಕಾರಣಿಗಳು ನಮ್ಮ ಮೂಡಿಗೆರೆಯನ್ನು ಅಭಿವೃದ್ದಿಗೆ ಕೊಂಡೊಯ್ಯುತ್ತೇವೆ ಎಂದು ಬೊಗಳೆ ಬಿಡುತ್ತಿರುವುದು ನಾವು ಇತ್ತೀಚಿಗೆ ಕಾಣಬಹುದು. ಆದರೆ ಕನಿಷ್ಟಪಕ್ಷ ಮೂಡಿಗೆರೆ ನಾಮಫಲಕ ಹಾಗೂ ಫ್ಲಾಟ್ ಫಾರಂ ಕೊಡಿಸಲು ಸಾಧ್ಯವಾಗಿಲ್ಲ. ಇದು ಮೂಡಿಗೆರೆ ಸಾರ್ವಜನಿಕರ ದುರಂತ. ಮೂಡಿಗೆರೆ ಸೌಂದರ್ಯವನ್ನು ಸವಿಯಲು ಬೆಂಗಳೂರಿನಿಂದ ಬಸ್ ಮೂಲಕ ಬರುವ ಹಾಗೂ ಹೊಸದಾಗಿ ಬರುವ ಪ್ರಯಾಣಿಕರಿಗೆ ಇಲ್ಲಿನ ಬಸ್ ನಿಲ್ದಾಣದಲ್ಲಿ ಮೂಡಿಗೆರೆಗೆ ನಿಗದಿಪಡಿಸಿದ ಪ್ಲಾಟ್ ಫಾರಂ ಅಥವಾ ನಾಮಫಲಕದ ಅಲಭ್ಯತೆ ಇವರನ್ನು ಮುಜುಗರಕ್ಕೆ ಸಿಕ್ಕಿಸುವುದಲ್ಲದೇ ಈ ಬಗ್ಗೆ ಅಲ್ಲೆ ಎಲ್ಲೋ ಒಂದು ಕಡೆ ಮೂಡಿಗೆರೆ, ಮೂಡಿಗೆರೆ, ಎಂದು ಕೂಗುವ ಬಸ್ಸಿನ ಸಿಬ್ಬಂದಿಯೊಂದಿಗೆ ಈ ವಿಚಾರವಾಗಿ ಕೇಳಿದರೆ ಅವರು ಅದಕ್ಕೆ ಇಲ್ಲ ನಮಗೆ ಇದುವರೆಗೂ ಯಾವುದೇ ನಿಗದಿತ ಪ್ಲಾಟ್ ಫಾರಂ ನೀಡಿಲ್ಲ ಇದನ್ನು ನಾವು ಯಾರ ಬಳಿ ಹೇಳುವುದು ಎಂಬಂತಹ ಉತ್ತರವನ್ನು ಕೊಟ್ಟು ಮೌನವಾಗುತ್ತಾರೆ. ಆದರೆ ಇತ್ತೀಚಿನ ಪರಿಸ್ಥಿತಿಯಲ್ಲಿ ಕೇವಲ ಬಾಯಿ ಮಾತಲ್ಲಿ ಅಭಿವೃದ್ದಿಯ ಬಗ್ಗೆ ಮಾತನಾಡುವ ಹಾಗೂ ಆಳುವ ರಾಜಕಾರಣಿಗಳು ಇನ್ನಾದರು ಇಂತಹ ಸಣ್ಣ ಸಣ್ಣ ಕೆಲಸವನ್ನು ಆದಷ್ಟು ಬೇಗ ಮಾಡಿಸಿ ದೊಡ್ಡ ಹೆಸರು ಪಡೆದುಕೊಳ್ಳುವರೇ ಎಂದು ಕಾದುನೋಡಬೇಕಾಗಿದೆ.