ಬೆಂಗಳೂರು : ಕಾಂಗ್ರೆಸ್‌ ಮೀಡಿಯಾ ಪ್ಯಾನಲಿಸ್ಟ್‌ ಆಗಿ ಪದ್ಮ ಪ್ರಸಾದ್‌ ಜೈನ್‌ ಆಯ್ಕೆ…

245

ಬೆಂಗಳೂರು : ಆಧುನಿಕ ಭಾರತದಲ್ಲಿ ಮಾಧ್ಯಮಗಳ ಪಾತ್ರ ಹಿರಿದು. ಅದರಲ್ಲೂ ಇತ್ತೀಚಿನ ವರ್ಷಗಳಲ್ಲಿ ಪ್ರಿಂಟ್‌, ಎಲೆಕ್ಟ್ರಾನಿಕ್‌ ಹಾಗೂ ಸಾಮಾಜಿಕ ಜಾಲತಾಣಗಳು ಕೂಡ ಪರಿಣಾಮಕಾರಿಯಾಗಿ ಬೆಳೆದು ನಿಂತಿವೆ. ಸಂಘ-ಸಂಸ್ಥೆ, ಪಕ್ಷ ಹೀಗೆ ಪ್ರತಿಯೊಂದರ ಅಭಿವೃದ್ಧಿಯಲ್ಲೂ ಕೂಡ ಮಾಧ್ಯಮಗಳ ಪಾತ್ರ ಹಿರಿದು. ಹಾಗಾಗಿ, ಮಾಧ್ಯಮವನ್ನ ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂದು ಕರೆಯುತ್ತಾರೆ. ಆದ್ದರಿಂದ ಆ ಮಾಧ್ಯಮವನ್ನ ಸಮರ್ಥವಾಗಿ ಬಳಸಿಕೊಂಡು ಪಕ್ಷವನ್ನ ಬೆಳೆಸುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್‌ ಮುಖಂಡ ಪ್ರದ್ಮ ಪ್ರಸಾದ್‌ ಜೈನ್‌ ಅವರನ್ನ ರಾಜ್ಯ ಕೆಪಿಸಿಸಿ ಮೀಡಿಯಾ ಪ್ಯಾನಲಿಸ್ಟ್‌ ಆಗಿ ನೇಮಕ ಮಾಡಿ ಆದೇಶ ಹೊರಡಿಸಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಆದೇಶ ಹೊರಡಿಸಿದ್ದು ವಿದ್ಯಾರ್ಥಿಯಾಗಿದ್ದಾಗಿನಿಂದಲೂ ಜನಪರ ಹೋರಾಟದ ಮೂಲಕ ವಿದ್ಯಾರ್ಥಿ ನಾಯಕನಾಗಿ ಗುರುತಿಸಿಕೊಂಡಿದ್ದ ಪದ್ಮ ಪ್ರಸಾದ್‌ ಜೈನ್‌ ಈಗಾಗಲೇ ಕಾಂಗ್ರೆಸ್‌ ಪಕ್ಷದಲ್ಲಿ ಹಲವು ಹುದ್ದೆಗಳನ್ನ ಅಲಂಕರಿಸಿ ಅನುಭವಿ ರಾಜಕಾರಣಿಯಾಗಿದ್ದಾರೆ. ಎಂ.ಎ. ಎಲ್.ಎಲ್.ಬಿ ಓದಿರೋ ಪದ್ಮ ಪ್ರಸಾದ್‌ ಅವರು, ಕಾಂಗ್ರೆಸ್‌ ಕಾನೂನು ಘಟಕದ ಪ್ರದಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ರಾಜ್ಯ ಎನ್.ಎಸ್.ಯು.ಐ.ನ ಉಪಾಧ್ಯಕ್ಷರಾಗಿ ಪಕ್ಷ ಚಟುವಟಿಕೆಯಲ್ಲಿ ಪಾಲ್ಗೊಂಡು ಸಂಘಟನೆ ಕಟ್ಟಿದ ಇವರ ಅನುಭವ ಹಿರಿದು. ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾ ಕಾಂಗ್ರೆಸ್‌ ನ ಪ್ರದಾನ ಕಾರ್ಯದರ್ಶಿಯಾಗಿಯೂ ಆಗಿದ್ದ ಇವರು ಸೂಕ್ಷ್ಮ ಜಿಲ್ಲೆ ಮಂಗಳೂರಿನಲ್ಲಿ ಪಕ್ಷವನ್ನ ಕಟ್ಟಿ ಬೆಳೆಸೋದ್ರಲ್ಲಿ ಸಾಕಷ್ಟು ಶ್ರಮವಹಿಸಿದ್ದರು. ಇದರ ಜೊತೆಗೆ ಕಾಂಗ್ರೆಸ್‌ ಪಕ್ಷದಲ್ಲಿ ಕೋಆರ್ಡಿನೇಟರ್ ಆಗಿ,ಕಾಂಗ್ರೆಸ್‌ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿರೋ ಪದ್ಮಪ್ರಸಾದ್‌ ಜೈನ್‌ ಎಂದೂ ಕೂಡ ಅಧಿಕಾರದ ಬೆನ್ನು ಬಿದ್ದವರಲ್ಲ. ಇವರು ಅಲಂಕರಿಸಿದ ಹುದ್ದೆಗಳೆಲ್ಲಾ ಇವರ ಹೋರಾಟದ ಮನೋಭಾವ, ಪಕ್ಷ ಸಂಘಟನೆ ಹಾಗೂ ಸಿದ್ದಾಂತಕ್ಕೆ ಸಿಕ್ಕದ್ದು. ಹಾಗಾಗಿ, ಪಕ್ಷಕ್ಕೆ ಇವರ ಸೇವೆ, ಜ್ಞಾನ ಹಾಗೂ ಸಂಘನೆಯಲ್ಲಿನ ಚತುರತೆಯನ್ನ ಗಮನಿಸಿದ ಕೆಪಿಸಿಸಿ ಇವರನ್ನ ಮೀಡಿಯಾ ಪ್ಯಾನಲಿಸ್ಟ್‌ ಆಗಿ ನೇಮಕ ಮಾಡಿದೆ. ಆದ್ದರಿಂದ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ ಹಾಗೂ ಪದ್ಮ ಪ್ರಸಾದ್‌ ಜೈನ್‌ ಕೂಡ ಸಿಕ್ಕಿರೋ ಹೊಸ ಜವಾಬ್ದಾರಿಯನ್ನ ಸ್ವಾಗತಿಸಿ ಪಕ್ಷ ಸಂಘಟನೆಗೆ ಮತ್ತಷ್ಟು ಪರಿಣಾಮಕಾರಿಯಾಗಿ ಈ ಹುದ್ದೆಯನ್ನ ಬಳಸಿಕೊಳ್ಳಲು ಮುಂದಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ ಕೂಡ ಇದನ್ನ ಸ್ವಾಗತಿಸಿದೆ.