ಮೂಡಿಗೆರೆ : ಶೋಷಿತರ ಏಳಿಗೆಗಾಗಿ ಶ್ರಮಿಸಿದ ಅಂಬೇಡ್ಕರ್ ಚಿಂತನೆಗಳನ್ನು ಮನೆಮನೆಗಳಿಗೆ ತಲುಪಿಸಬೇಕಿದೆ : ಎಂ.ಪಿ ಕುಮಾರಸ್ವಾಮಿ.

324
firstsuddi

ಕೊಟ್ಟಿಗೆಹಾರ : ಶೋಷಿತ ಜನಾಂಗದ ಏಳಿಗೆಗಾಗಿ ಶ್ರಮಿಸಿದ ಅಂಬೇಡ್ಕರ್ ಚಿಂತನೆಗಳನ್ನು ಮನೆಮನೆಗಳಿಗೆ ತಲುಪಿಸಬೇಕಿದೆ ಎಂದು ಶಾಸಕ ಎಂ.ಪಿ ಕುಮಾರಸ್ವಾಮಿ ಹೇಳಿದರು.
ಡಾ.ಬಿ.ಆರ್ ಅಂಬೇಡ್ಕರ್ ಕಟ್ಟಡ ನಿರ್ವಹಣಾ ತಾತ್ಕಾಲಿಕ ಸಮಿತಿ ವತಿಯಿಂದ ನಡೆದ ಅಂಬೇಡ್ಕರ್ ಪರಿನಿಬ್ಬಾಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಂಬೇಡ್ಕರ್ ಅವರು ಎಲ್ಲರ ಹೃದಯದಲ್ಲಿ ನೆಲೆಸಿದ್ದಾರೆ. ಅವರು ಜಗತ್ತಿನ ಮಹನೀಯರು. ಸಾಮಾಜಿಕ ಕಳಕಳಿ, ರಾಜನೀತಿ ಪಾಂಡಿತ್ಯ, ಆರ್ಥಿಕ ಪರಿಮಿತಿ, ಸಾಂಸ್ಕೃತಿಕ ಚಿಂತನೆ, ಸಂವಿಧಾನ ರಚನೆ ಎಲ್ಲದರಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದರು. ಅವರು ಬದುಕಿನುದ್ದಕ್ಕೂ ಶೋಷಿತರ ಏಳಿಗೆಗಾಗಿ ಶ್ರಮಿಸಿದ್ದಾರೆ ಎಂದರು.
ಜಿ.ಪಂ ಸದಸ್ಯ ಶಾಮಣ್ಣ ಅವರು ಮಾತನಾಡಿ ಅಂಬೇಡ್ಕರ್ ಆಧುನಿಕ ಭಾರತದ ಪ್ರಜಾಪ್ರಭುತ್ವದ ನಿರ್ಮಾತೃರಾಗಿದ್ದಾರೆ. ಸಂವಿಧಾನ ಬಂದ ನಂತರ ದೇಶದ ತಳಸಮುದಾಯದವರು ಶಿಕ್ಷಣ ಪಡೆಯಲು ಸಾಧ್ಯವಾಯಿತು ಎಂದರು.
ಕಟ್ಟಡ ಸಮಿತಿ ಅಧ್ಯಕ್ಷ ಚಂದ್ರಯ್ಯ ಅವರು ಮಾತನಾಡಿ ಸರ್ವ ಜನಾಂಗಕ್ಕೂ ಸಾಮಾಜಿಕ ನ್ಯಾಯ ದೊರೆಯಬೇಕು. ಹುಟ್ಟಿದ ಪ್ರತಿ ಜೀವವೂ ಉನ್ನತ್ತ ಬದುಕು ನಡೆಸಬೇಕು ಎಂಬ ಆಶಯ ಅಂಬೇಡ್ಕರ್ ಹೊಂದಿದ್ದರು. ಇದನ್ನು ಅವರು ಸಂವಿಧಾನದಲ್ಲಿ ದಾಖಲಿಸಿದ್ದಾರೆ ಎಂದರು.
ಬಣಕಲ್ ಪ್ರೌಡಶಾಲಾ ಶಿಕ್ಷಕರಾದ ಜಿ.ಎಚ್. ಶ್ರೀನಿವಾಸ್, ವಿದ್ಯಾಭಾರತಿ ಶಾಲೆಯ ಶಿಕ್ಷಕ ನಾಗರಾಜ್ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ತಾ.ಪಂ ಸದಸ್ಯ ಸಬ್ಲಿ ದೇವರಾಜ್, ಆಲ್ದೂರು ಕ್ಷೇತ್ರದ ಜಿ.ಪಂ ಸದಸ್ಯ ನಿಖಿಲ್ ಚಕ್ರವರ್ತಿ, ಗ್ರಾ.ಪಂ ಸದಸ್ಯರಾದ ಪ್ರಮೀಳಾ, ಪಿ.ಕೆ ಮಂಜುನಾಥ್, ಶಿಕ್ಷಕ ಹಾಲಯ್ಯ, ಕಟ್ಟಡ ಸಮಿತಿ ಕಾರ್ಯದರ್ಶಿ ಲೋಕೇಶ್ ಬೆಟ್ಟಗೆರೆ, ರಂಜಿತ್ ಕೋಗಿಲೆ, ಸುರೇಶ್ ಹೆಬ್ರಿಗೆ, ಗಿರೀಶ್ ಬಸನಿ ಮುಂತಾದವರು ಇದ್ದರು.