ಇಂದಿರಾ ಗಾಂಧಿ ಮದುವೆ ಆಗಿದ್ಯಾರಿಗೆ..? ಇದನ್ನು ಸಿದ್ದರಾಮಯ್ಯ ಅವರು ಕ್ರಾಸ್ ಬಿಡ್ ಎಂದು ಒಪ್ಪಿಕೊಳ್ಳುತ್ತಾರಾ..?-ಕೆ.ಎಸ್. ಈಶ್ವರಪ್ಪ

206
firstsuddi

ಬೆಂಗಳೂರು : ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಅವರು ಕ್ರಾಸ್ ಬಿಡ್ ಎಂದು ಒಪ್ಪಿಕೊಳ್ಳುತ್ತಾರಾ..? ಎಂದು ಸಚಿವ ಕೆ.ಎಸ್. ಈಶ್ವರಪ್ಪ ಅವರು ತಿರುಗೇಟು ನೀಡಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಕ್ರಾಸ್ ಬಿಡ್ ಬಗ್ಗೆ ಪ್ರಸ್ತಾಪ ಮಾಡುತ್ತಿದ್ದಾರೆ. ಇಂದಿರಾ ಗಾಂಧಿ ಮದುವೆ ಆಗಿದ್ಯಾರಿಗೆ..? ಇದನ್ನು ಸಿದ್ದರಾಮಯ್ಯ ಅವರು ಕ್ರಾಸ್ ಬಿಡ್ ಎಂದು ಒಪ್ಪಿಕೊಳ್ಳುತ್ತಾರಾ..? ಅದೇ ರೀತಿ ರಾಜೀವ್ ಗಾಂಧಿ ಸೋನಿಯಾ ಗಾಂಧಿ ಕ್ರಾಸ್ ಬಿಡ್ ಎಂದು ಒಪ್ಪಿಕೊಳ್ಳುತ್ತಾರಾ..? ಪ್ರಿಯಾಂಕ ಗಾಂಧಿ ಹಾಗೂ ರಾಬರ್ಟ್ ವಾದ್ರ್ರಾ ಕ್ರಾಸ್ ಬಿಡ್ ಎಂದು ಸಿದ್ದರಾಮಯ್ಯ ಅವರು ಒಪ್ಪಿಕೊಳ್ಳುತ್ತಾರಾ..? ಈ ಕಾಂಗ್ರೆಸ್ ನವರಿಗೆ ದೇಶದ ಸಂಸ್ಕøತಿ ಏನೆಂದು ಗೊತ್ತಿಲ್ಲ. ನಮ್ಮ ದೇಶದ ಹೆಣ್ಣು ಮಕ್ಕಳನ್ನು ಪ್ರೀತಿ ಮಾಡುವುದಾಗಿ ನಂಬಿಸಿ ಮೋಸ ಮಾಡಿ ವಿದೇಶಕ್ಕೆ ಹೆಣ್ಣು ಮಕ್ಕಳನ್ನು ಮಾರಾಟ ಮಾಡುತ್ತಿದ್ದಾರೆ. ಅಂತರ್ಜಾತಿ ವಿವಾಹಕ್ಕೆ ನನ್ನ ವಿರೋಧವಿಲ್ಲ. ಆದರೆ ಪ್ರೀತಿ ಹೆಸರಿನಲ್ಲಿ ಕಂಡೋರ ಮಕ್ಕಳನ್ನು ಮಾರಾಟ ಮಾಡುವುದನ್ನು ಸಿದ್ದರಾಮಯ್ಯ ಅವರು ಒಪ್ಪಿಕೊಳ್ಳುತ್ತಾರಾ..? 600 ವರ್ಷಗಳ ಹಿಂದಿನಿಂದಲೇ ಕ್ರಾಸ್ ಬಿಡ್ ಇದೆ ಎಂದು ಹೇಳುತ್ತಿದ್ದಾರೆ. ಕ್ರಾಸ್ ಬಿಡ್ ಪದ ಬಳಸುವುದು ನಮ್ಮ ಸಂಸ್ಕೃತಿ ಅಲ್ಲ ಎಂದು ಕಿಡಿಕಾರಿದರು.
ಗೋಹತ್ಯೆ ನಿಷೇಧ ಕಾಯ್ದೆ ತರುವಲ್ಲಿ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸುತ್ತಿರುವುದಕ್ಕೆ ಪ್ರತಿಕ್ರಯಿಸಿದ ಅವರು, ಗ್ರಾಮ ಪಂಚಾಯಿತಿ ಚುನಾವಣೆಗೆ ಕಾಂಗ್ರೆಸ್ ನವರು ತಯಾರಿಸುವ ಪ್ರಣಾಳಿಕೆಯಲ್ಲಿ ಬಿಜೆಪಿಯವರು ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತರುತಿದ್ದಾರೆ. ನಮ್ಮನ್ನು ನಿವು ಚುನಾವಣೆಯಲ್ಲಿ ಗೆಲ್ಲಿಸಿದರೆ ಎಲ್ಲಿ ಬೇಕು ಅಲ್ಲಿ ಹಸುವನ್ನು ಕಡಿಯಲು ಅವಕಾಶ ಮಾಡಿಕೊಡುತ್ತೇವೆ. ಹಸುವನ್ನು ಕಳ್ಳತನ ಮಾಡುವುದಕ್ಕೂ ಅವಕಾಶ ಕೊಡುತ್ತೇವೆ ಒಂದು ಪೈಸನೂ ಕೂಡಾ ಪೆನಾಲ್ಟಿ ಹಾಕುವುದಿಲ್ಲ. ಜೈಲಿಗೆ ಕಳುಹಿಸುವುದಿಲ್ಲ. ನಿಮಗೆ ಸನ್ಮಾನ ಮಾಡುತ್ತೇವೆ ಎಂದು ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಲಿ.
ನಾವು ಗೋವನ್ನು ತಾಯಿ ಎಂದು ಕರೆಯುತ್ತೇವೆ. ಆದರೆ ಸಿದ್ದರಾಮಯ್ಯ ಅವರು ಗೋವನ್ನು ವಯಸ್ಸಾದ ಮೇಲೆ ಕಸಾಯಿ ಖಾನೆಗೆ ನೀಡದೆ ಬಿಜೆಪಿ ಹಾಗೂ ಆರ್.ಎಸ್.ಎಸ್ ನಾಯಕರ ಮನೆ ಮುಂದೆ ಬಿಟ್ಟುಕೊಳ್ಳಲಿ ಎಂದು ಹೇಳಿದ್ದಾರೆ. ಹಾಗಾದರೆ ಸಿದ್ದರಾಮಯ್ಯ ಅವರು ಅವರ ತಾಯಿಗೆ ವಯಸ್ಸಾಗಿದೆ ಎಂದು ಯಾರದಾದರೂ ಮನೆ ಮುಂದೆ ಬಿಟ್ಟು ಬರುತ್ತಾರಾ…? ಎಂದು ಆಕ್ರೋಶ ಹೊರಹಾಕಿದರು.