ಬೆಂಗಳೂರು ಜೋಡಿ ಕೊಲೆ ಪ್ರಕರಣ- ಆರೋಪಿಯ ಬಂಧನ…

42
firstsuddi

ಬೆಂಗಳೂರು: ಹಲಸೂರು ಗೇಟ್ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ ದುಷ್ಕರ್ಮಿಯೊಬ್ಬ ಇಬ್ಬರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದ. ಈ ಪ್ರಕರಣದ ಆರೋಪಿಯನ್ನು ಬಂಧಿಸಿರುವ ಹಲಸೂರುಗೇಟ್ ಠಾಣೆ ಪೊಲೀಸರು, ಹೆಚ್ಚಿನ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ವಶಕ್ಕೆ ಪಡೆಯಲು ಸಿದ್ಧತೆ ನಡೆಸುತ್ತಿದ್ದಾರೆ.

ಮಡಿವಾಳದ ನಿವಾಸಿ ಭದ್ರಾ ಕೊಲೆ ಆರೋಪಿ. ಹತ್ಯೆಯಾದ ಸುರೇಶ್ ಹಾಗೂ ಆರೋಪಿ ಭದ್ರಾ ನಡುವೆ ಕಟ್ಟಡದ ವಿಚಾರವಾಗಿ ಹಲವಾರು ವರ್ಷಗಳಿಂದ ಕಲಹ ಇತ್ತು. ಇತ್ತಿಚೇಗೆ ನ್ಯಾಯಾಲಯದಲ್ಲಿ ಕೇಸ್ ಮೃತನ ಪರವಾಗಿ ಆಗಿದ್ದ ಕಾರಣ ಅರೋಪಿ ಕೋಪಗೊಂಡಿದ್ದ. ಆದಾದ ಬಳಿಕ ಮೂರು ನಾಲ್ಕು ಬಾರಿ ಜಗಳ ಮಾಡಿಕೊಂಡು ಹಲಸೂರು ಗೇಟ್ ಪೊಲೀಸ್ ಠಾಣೆಗೆ ಹೋಗಿದ್ದರು. ಈ ವೇಳೆ ಸಿಆರ್​ಪಿಸಿ 107 ಅನ್ವಯ ಬಾಂಡ್ ಬರೆಸಿಕೊಂಡ ಪೊಲೀಸರು, ಇಬ್ಬರಿಗೂ ವಾರ್ನ್ ಮಾಡಿದ್ದರು. ಮುಂದೆ ಗಲಾಟೆ ಮಾಡಿಕೊಂಡರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು.

ಅಲ್ಲದೆ ತನ್ನ ಸಂಸಾರ ಹಾಳು ಮಾಡಲು ಸುರೇಶ್ ಕಾರಣನಾಗಿದ್ದು, ಇದೇ ವಿಚಾರಕ್ಕಾಗಿ ಗಲಾಟೆಯಾಗಿತ್ತು. ಇತ್ತ ಪತಿ ಸರಿಯಿಲ್ಲ ಎಂದು ಭದ್ರಾನ ಹೆಂಡತಿ ಪೊಲೀಸರ ಬಳಿ ದೂರು ನೀಡಿದ್ದಳು.

ಆಸ್ತಿ ಕೈತಪ್ಪುವುದರ ಜೊತೆಗೆ ತನ್ನ ಪತ್ನಿಯೂ ದೂರವಾಗಲು ಸುರೇಶ್ ಕಾರಣ ಎಂದು ಭಾವಿಸಿ ನಿನ್ನೆ ರಾತ್ರಿ 8 ಗಂಟೆ ಸುಮಾರಿಗೆ ಅಂಗಡಿಗೆ ಬಂದಿದ್ದಾನೆ. ಇದೇ ವೇಳೆ ಸ್ನೇಹಿತನ ಭೇಟಿಗೆ ಬಂದಿದ್ದ ಚಾಮರಾಜಪೇಟೆ ನಿವಾಸಿ ಮಹೇಶ್ ಹೊರ ಹೋಗುತ್ತಿದ್ದಂತೆ ಒಳನುಗ್ಗಿ ಚಾಕುವಿನಿಂದ ಮನಬಂದಂತೆ ಸುರೇಶ್ ಮೇಲೆ ಭದ್ರಾ ಹಲ್ಲೆ ಮಾಡಿದ್ದಾನೆ. ಸುರೇಶ್ ಕಿರುಚಾಟ ಕೇಳಿ ಸ್ನೇಹಿತ ಮಹೇಂದ್ರ ಜಗಳ ಬಿಡಿಸಲು ಮುಂದಾಗಿದ್ದ. ಈ ವೇಳೆ ಮಹೇಂದ್ರನಿಗೂ ಚಾಕುವಿನಿಂದ ಇರಿದು ಬರ್ಬರವಾಗಿ ಇಬ್ಬರನ್ನು ಹತ್ಯೆ ಮಾಡಿದ್ದಾನೆ.

ಸದ್ಯ ಪ್ರಾಥಮಿಕ ತನಿಖೆ ವೇಳೆ ಕೊಲೆಯನ್ನು ಒಬ್ಬನೇ ಬಂದು ಮಾಡಿರುವುದು ದೃಢಪಟ್ಟಿದೆ. ಆದ್ರೆ, ಕೊಲೆಗೆ ಬೇರೆ ಯಾರಾದರೂ ಪ್ರೇರಣೆ ನೀಡಿದ್ದಾರಾ ಎಂದು ಪರಿಶೀಲನೆ ಶುರುವಾಗಿದೆ.