ಬಾಗಲಕೋಟೆ: ಬೈಕ್ ಹಾಗೂ ಟಂಟಂ ನಡುವೆ ಅಪಘಾತ ಸಂಭವಿಸಿ ಸ್ಥಳದಲ್ಲಿಯೇ ಇಬ್ಬರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹುನಗುಂದ ತಾಲೂಕಿನ ನಾಗೂರು ಕ್ರಾಸ್ ಬಳಿ ನಡೆದಿದೆ.
ಟಂಟಂ ವಾಹನದಲ್ಲಿದ್ದ ಬೇವಿನಮಟ್ಟಿ ಗ್ರಾಮ ಮೂಲದ ಈರಪ್ಪ ಪವಾಡಗೌಡ (45) ಹಾಗೂ ಬೈಕ್ ಮೇಲಿದ್ದ ಲಿಂಗಸಗೂರು ತಾಲ್ಲೂಕಿನ ಬೋಗಾಪೂರದ ಅಭಿಷೇಕ್ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
ಘಟನಾ ಸ್ಥಳಕ್ಕೆ ಹುನಗುಂದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಹುನಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










