ಬೋನಿಗೆ ಬಿದ್ದಿದ್ದ ಚಿರತೆಯನ್ನು ಕೆಣಕಲು ಹೋಗಿ ಆಸ್ಪತ್ರೆ ಸೇರಿದ ವ್ಯಕ್ತಿ!

784
firstsuddi

ತುಮಕೂರು : ಬೋನಿಗೆ ಬಿದ್ದಿದ್ದ ಚಿರತೆಯನ್ನು ಕೆಣಕಲು ಹೋಗಿ ವ್ಯಕ್ತಿಯೋರ್ವ ಮುಖ ಕೈ ಪರಚಿಸಿಕೊಂಡಿರುವ ಘಟನೆ ಜಿಲ್ಲೆಯ ತಿಪಟೂರು ತಾಲ್ಲೂಕಿನ ಹೊನ್ನವಳ್ಳಿ ಗ್ರಾಮದಲ್ಲಿ ನಡೆದಿದೆ. ದಾಸನಕಟ್ಟೆ ಗ್ರಾಮದ ನಿವಾಸಿ ರಮೇಶ್(45) ಚಿರತೆಯಿಂದ ಪರಚಿಸಿಕೊಂಡಿರುವ ವ್ಯಕ್ತಿ ಎಂದು ಗುರುತಿಸಲಾಗಿದ್ದು, ಆಹಾರ ಅರಸಿ ನಾಡಿಗೆ ಬಂದ ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆಯಿಂದ ಬೋನನ್ನು ಇಡಲಾಗಿತ್ತು. ಈ ವೇಳೆ ಬೋನಿಗೆ ಬಿದ್ದಿದ್ದ ಚಿರತೆಯನ್ನು ನೋಡಿದ ರಮೇಶ್ ಅವರು ಕೋಲಿನಿಂದ ತಿವಿದು ಚಿರತೆಯೊಂದಿಗೆ ಚೆಲ್ಲಾಟವಾಡುತ್ತಿದ್ದರು. ಇದರಿಂದ ರೊಚ್ಚಿಗೆದ್ದ ಚಿರತೆ ಕೋಲಿನ ಸಮೇತ ರಮೇಶ್ ಅವರನ್ನು ಬೋನಿನ ಬಳಿ ಎಳೆದು ಮುಖ ಹಾಗೂ ಕೈಗೆ ಪರಚಿದ್ದು, ರಮೇಶ್ ಅವರ ಕೂಗಾಟ ಕೇಳಿ ಸ್ಥಳೀಯರು ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.