ನವದೆಹಲಿ: ಪಾಕಿಸ್ತಾನ ಸರ್ಕಾರದ ಅಧಿಕೃತ ಟ್ವಿಟ್ಟರ್ ಖಾತೆಯನ್ನು ಭಾರತದಲ್ಲಿ ಸ್ಥಗಿತಗೊಳಿಸಲಾಗಿದೆ.
ಎರಡನೇ ಬಾರಿಗೆ ಭಾರತ ಪಾಕ್ ಸರ್ಕಾರದ ಖಾತೆಯನ್ನು ನಿರ್ಬಂಧಿಸಿದೆ. ಈ ಹಿಂದೆ ಜುಲೈನಲ್ಲಿ ಪಾಕಿಸ್ತಾನ ಸರ್ಕಾರದ ಖಾತೆಯನ್ನು ತಡೆಹಿಡಿಯಲಾಗಿತ್ತು. ಅದಾದ ಬಳಿಕ ನಿರ್ಬಂಧವನ್ನು ತೆಗೆಯಲಾಗಿತ್ತು. ಆದರೆ ಇದೀಗ ಕಾನೂನು ಬೇಡಿಕೆಗೆ ಅನುಗುಣವಾಗಿ ಮತ್ತೆ ತಡೆಹಿಡಿಯಲಾಗಿದೆ. ಹೀಗಾಗಿ ಪಾಕಿಸ್ತಾನದ @GovtogPakistan ಟ್ವಿಟ್ಟರ್ ಖಾತೆ ಭಾರತದಲ್ಲಿ ಕಾಣಸಿಗುವುದಿಲ್ಲ.
ಭಾರತದ ರಾಷ್ಟ್ರೀಯ ಭದ್ರತೆ, ವಿದೇಶಿ ಸಂಬಂಧಗಳು ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಸಂಬಂಧಿಸಿದ ಸುಳ್ಳು ಮಾಹಿತಿಯನ್ನು ಹರಡಿದ್ದಕ್ಕಾಗಿ 6 ಪಾಕಿಸ್ತಾನ ಮೂಲದ ಚಾನಲ್ ಗಳು ಸೇರಿದಂತೆ 16 ಯೂಟ್ಯೂಬ್ ಸುದ್ದಿ ಚಾನಲ್ ಗಳನ್ನು ಈ ಹಿಂದೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ನಿರ್ಬಂಧಿಸಿತ್ತು.










