ಭಾರತ ಮೂಲದ ಮಹಿಳೆ ನೆದರ್‌ಲ್ಯಾಂಡ್‌ನ ಅಮೆರಿಕ ರಾಯಭಾರಿ – ಜೋ ಬೈಡೆನ್ ನಾಮನಿರ್ದೇಶನ…

64
firstsuddi

ವಾಷಿಂಗ್ಟನ್ : ನೆದರ್ ಲ್ಯಾಂಡ್ ನ ಅಮೆರಿಕ ರಾಯಭಾರಿಯಾಗಿ ಭಾರತ ಮೂಲದ ಸಾಮಾಜಿಕ ಕಾರ್ಯಕರ್ತೆ ಶೆಫಾಲಿ ರಜ್ದಾನ್ ದುಗ್ಗಾಲ್ ಅವರನ್ನು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ನಾಮನಿರ್ದೇಶನ ಮಾಡಿದ್ದಾರೆ.

ಶೆಫಾಲಿಯವರು ಜಮ್ಮು-ಕಾಶ್ಮೀರದ ಕಾಶ್ಮೀರಿ ಪಂಡಿತರ ಕುಟುಂಬಕ್ಕೆ ಸೇರಿದವರು. ಇವರಿಗೆ ಎರಡು ವರ್ಷವಾಗಿದ್ದಾಗ ಕುಟುಂಬ ಯುಎಸ್ ನ ಪಿಟ್ಸ್‌ಬರ್ಗ್​ಗೆ ಹೋಗಿ ನೆಲೆಸಿತು. ಅದಾದ ಬಳಿಕ 5ನೇ ವರ್ಷದಲ್ಲಿದ್ದಾಗ ಒಹಿಯೋದ ಸಿನ್ಸಿನಾಟಿಗೆ ತೆರಳಿ ನೆಲೆಸಿದರು. ಸೈಕಾಮೋರ್ ಹೈಸ್ಕೂಲ್ ನಲ್ಲಿ ಮಾಧ್ಯಮಿಕ ಶಿಕ್ಷಣ ಕಲಿತು, ಒಹಿಯೋದ ಮೈಮಿ ಯೂನಿವರ್ಸಿಟಿಯಲ್ಲಿ ಸಮೂಹ ಸಂವಹನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಶೆಫಾಲಿ ತಮ್ಮ 50ನೇ ವಸಂತದಲ್ಲಿದ್ದು, ಇಬ್ಬರು ಮಕ್ಕಳ ತಾಯಿಯಾಗಿದ್ದಾರೆ. ಇವರು ಹ್ಯೂಮನ್ ರೈಟ್ಸ್ ವಾಚ್ ನ ಸ್ಯಾನ್ ಫ್ರಾನ್ಸಿಸ್ಕೋ ಸಮಿತಿಯ ಸದಸ್ಯರು, ವೇಕ್ ಫಾರೆಸ್ಟ್ ಯೂನಿವರ್ಸಿಟಿ ಲೀಡರ್ಶಿಪ್ ಮತ್ತು ಕ್ಯಾರೆಕ್ಟರ್ ಕೌನ್ಸಿಲ್ ಸದಸ್ಯರೂ ಆಗಿದ್ದರು. ಅಲ್ಲದೇ ಬರಾಕ್ ಒಬಾಮಾ, ಹಿಲರಿ ಕ್ಲಿಂಟನ್ ಅವರ ಜತೆಗೂ ಕೆಲಸ ಮಾಡಿದ್ದಾರೆ.

ಶೆಫಾಲಿಯವರು ಅನುಭವಿ ರಾಜತಾಂತ್ರಿಕರು, ಮಹಿಳಾ ಹಕ್ಕುಗಳ ಪರ ವಕೀಲರು ಮತ್ತು ಮಾನವ ಹಕ್ಕುಗಳ ಪರ ಹೋರಾಟಗಾರರು ಎಂದು ವೈಟ್ ಹೌಸ್ ಹೇಳಿದೆ.