ವಿಜಯಪುರ: ಟ್ರಕ್ ಬೈಲ್ ಬಳಿಯ ಸರ್ವೀಸ್ ರಸ್ತೆಯ ಡಿವೈಡರ್ ಮೇಲೆ ಕುಳಿತಿದ್ದ ನಾಲ್ವರ ಮೇಲೆ ಅಪರಿಚಿತ ವಾಹನವೊಂದು ಹರಿದ ಪರಿಣಾಮ ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 50ರಲ್ಲಿನ ಟೋಲ್ ಗೇಟ್ ಬಳಿಯ ಟ್ರಕ್ ಬೈಲೈನ್ ಬಳಿ ನಡೆದಿದೆ.
ಮೃತರನ್ನು ಶಿವಾನಂದ ಚೌಧರಿ (25), ಸುನೀಲ್ ಖಾನಾಪೂರ (26), ಈರಣ್ಣ ಕೋಲಾರ (26) ಹಾಗೂ ಪ್ರವೀಣ್ ಪಾಟೀಲ್ (30) ಎಂದು ಗುರುತಿಸಲಾಗಿದೆ. ಮೃತರೆಲ್ಲರೂ ವಿಜಯಪುರ ನಗರದ ವಜ್ರ ಹನುಮಾನ್ ನಗರದ ವಾಸಿಗಳು.
ಅಪರಿಚಿತ ವಾಹನ ಎರಡು ಬೈಕ್ ಮೇಲೂ ಹರಿದು ಪರಾರಿಯಾಗಿದೆ. ಇದರಿಂದ ಎರಡೂ ಬೈಕ್‌ಗಳು ಜಖಂ ಆಗಿವೆ. ಸ್ಥಳಕ್ಕೆ ವಿಜಯಪುರ ಗ್ರಾಮೀಣ ವಿಭಾಗದ ಡಿವೈಎಸ್‌ಪಿ ಗಿರಿಮಲ್ಲ ತಳಕಟ್ಟಿ ಹಾಗೂ ಇತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.










