ಕೊಟ್ಟಿಗೆಹಾರ:ಬಣಕಲ್ ಕಡೆಯಿಂದ ಮಂಗಳೂರು ಕಡೆಗೆ ಅಕ್ರಮವಾಗಿ ಬಿಡಾಡಿ ದನಗಳನ್ನು ಸಾಗಿಸುತ್ತಿದ್ದ ಮಂಗಳೂರು ಮೂಲದ ಆರೋಪಿಗಳನ್ನು ಬಣಕಲ್ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳು ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ 7 ದನಗಳನ್ನು ರಕ್ಷಣೆ ಮಾಡಲಾಗಿದ್ದು ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಪುತ್ತಿಗೆ ಗ್ರಾಮದ ಮಹಮ್ಮದ್ ಆರೀಪ್, ಬಜ್ಪೆ ಗ್ರಾಮದ ಮಹಮ್ಮದ್ ಸಫಾನ್ ಬಂಧಿತ ಆರೋಪಿಗಳು. ಬಣಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಬಣಕಲ್, ಬಾಳೂರು ಸುತ್ತಮುತ್ತ ಹೆಚ್ಚಿದ ಅಕ್ರಮ ಗೋಸಾಗಾಟ
ಬಣಕಲ್, ಬಾಳೂರು, ಕೊಟ್ಟಿಗೆಹಾರ ಸುತ್ತಮುತ್ತ ಬಿಡಾಡಿ ದನಗಳ ಅಕ್ರಮ ಗೋಸಾಗಾಟ ಹೆಚ್ಚಾಗಿದ್ದು ಕಡಿವಾಣ ಹಾಕಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಎಂದು ಸಾಮಾಜಿಕ ಕಾರ್ಯಕರ್ತ ಸಂಜಯಗೌಡ ಕೊಟ್ಟಿಗೆಹಾರ ಆಗ್ರಹಿಸಿದ್ದಾರೆ. ಬಿಡಾಡಿ ದನಗಳನ್ನು ಗುರಿಯಾಗಿಸಿಕೊಂಡು ಗೋಗಳ್ಳರು ಸಕ್ರಿಯವಾಗಿದ್ದು ಅಂಕೆ ಇಲ್ಲದೇ ಸಾಗಿರುವ ಅಕ್ರಮ ಗೋಸಾಗಾಟಕ್ಕೆ ಕಡಿವಾಣ ಹಾಕಬೇಕಿದೆ ಎಂದು ಒತ್ತಾಯಿಸಿದ್ದಾರೆ.