ಮಂಡ್ಯ ವಿದ್ಯಾರ್ಥಿನಿಗೆ ತಮಿಳುನಾಡಿನಲ್ಲಿ ಪ್ರಶಸ್ತಿ ಘೋಷಣೆ…

74
firstsuddi

ಚೆನ್ನೈ : ಮಂಡ್ಯದ ಪಿಇಎಸ್ ಕಾಲೇಜಿನಲ್ಲಿ ಹಿಂದೂ ಹುಡುಗರು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದರು. ಇದಕ್ಕೆ ಪ್ರತಿಯಾಗಿ ಮುಸ್ಕಾನ್ ಖಾನ್ ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿ ಭಾರೀ ಸುದ್ದಿಯಾಗಿದ್ದರು. ಇದೀಗ ಮುಸ್ಕಾನ್ ಧೈರ್ಯಕ್ಕೆ ಮೆಚ್ಚಿ ತಮಿಳುನಾಡು ಮುಸ್ಲಿಂ ಮುನ್ನೇತ್ರ ಕಳಗಂ(ಟಿಎಂಎಂಕೆ) ಫಾತಿಮಾ ಶೇಖ್ ಪ್ರಶಸ್ತಿ ನೀಡುವುದಾಗಿ ಘೋಷಿಸಿದೆ.

ಭಾರತೀಯ ಪ್ರಜೆಯಾಗಿ ತನಗೆ ನೀಡಿದ ಹಕ್ಕನ್ನು ಕಸಿದುಕೊಳ್ಳಲು ಯತ್ನಿಸಿದ ಕೇಸರಿ ದಳದ ಮುಂದೆ ನಿರ್ಭೀತಿಯಿಂದ ನಿಂತು ತನ್ನ ಹಕ್ಕನ್ನು ಪ್ರತಿಪಾದಿಸಿದ ಮುಸ್ಕಾನ್ ಅವರಿಗೆ ಫಾತಿಮಾ ಶೇಖ್ ಪ್ರಶಸ್ತಿಯನ್ನು ನೀಡಲು ಹೆಮ್ಮೆಪಡುತ್ತದೆ ಎಂದು ತಮಿಳುನಾಡು ಮುಸ್ಲಿಂ ಮುನ್ನೇತ್ರ ಕಳಗಂ ಹೇಳಿದೆ.