ಮೈಸೂರು : ತಂದೆ ಹಾಗೂ ಆತನ ಜೊತೆಗಿದ್ದ ಮಹಿಳೆಯನ್ನು ಮಗನೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಗರದ ಹೊರವಲಯದಲ್ಲಿರುವ ಶ್ರೀನಗರದಲ್ಲಿ ನಡೆದಿದೆ.
ಶಿವಪ್ರಕಾಶ್ (56) ಮತ್ತು ಲತಾ (48) ಮೃತ ದುರ್ದೈವಿಗಳು. ಕೆ.ಜಿ.ಕೊಪ್ಪಲು ನಿವಾಸಿಯಾಗಿದ್ದ ಶಿವಪ್ರಕಾಶ್, ಶ್ರೀನಗರದ ನಿವಾಸಿ ಲತಾ ಎಂಬುವರ ಮನೆಯಲ್ಲಿದ್ದರು. ಈ ವೇಳೆ ಲತಾ ಮನೆಗೆ ನುಗ್ಗಿದ ಸಾಗರ್, ತಂದೆಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಬಳಿಕ ಲತಾಳ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿ ಪರಾರಿಯಾಗಿದ್ದಾನೆ.
ಕೊಲೆಗೆ ನಿಖರ ಕಾರಣ ಇನ್ನು ತಿಳಿದುಬಂದಿಲ್ಲ. ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.










