ಮಟ ಮಟ ಮಧ್ಯಾಹ್ನವೇ ಕಾರಿನಲ್ಲಿ ಸೆಕ್ಸ್- ಬುದ್ಧಿಹೇಳಲು ತೆರಳಿದ ಪೊಲೀಸ್ ಮೇಲೆಯೆ ಕಾರು ಚಲಾಯಿಸಿಕೊಂಡು ಜೋಡಿ ಪರಾರಿ…

60
firstsuddi

ಬೆಂಗಳೂರು: ನಗರದ ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯ ಉದ್ಯಾನವನವೊಂದರ ಬಳಿ ಜೋಡಿಯೊಂದು ಮಟ ಮಟ ಮಧ್ಯಾಹ್ನವೇ ಕಾರಿನಲ್ಲೇ ಬೆತ್ತಲಾಗಿ ಕಾಮತೃಷೆ ತೀರಿಸಿಕೊಳ್ಳುತ್ತಿದ್ದರು. ಇದೇ ವೇಳೆ, ದೃಶ್ಯ ಕಂಡು ಬುದ್ಧಿಹೇಳಲು ಬಳಿ ತೆರಳಿದ ಪೊಲೀಸ್ ಮೇಲೆಯೆ ಕಾರು ಚಲಾಯಿಸಿಕೊಂಡು ಜೋಡಿ ಪರಾರಿಯಾಗಿದೆ. ಗಾಯಗೊಂಡ ಸಬ್ ಇನ್ಸ್​​ಪೆಕ್ಟರ್ ಮಹೇಶ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯ ಉದ್ಯಾನವನವೊಂದರ ಬಳಿ ಕಿಯೋ ಸೆಲಾಟೋಸ್ ಕಾರಿನಲ್ಲಿ ಬಂದಿದ್ದ ಜೋಡಿಯೊಂದು ಅಲ್ಲೇ ಬಟ್ಟೆಬಿಚ್ಚಿ ಕಾಮಕೇಳಿ ಆರಂಭಿಸಿದೆ. ಪಾರ್ಕ್​ನಲ್ಲಿ ಅನೇಕ ಮಂದಿ ಇದ್ದರೂ, ಅವರಿಗೆಲ್ಲ ತಾವು ಕಾಣಿಸುತ್ತಿದ್ದರೂ ಅದನ್ನು ಲೆಕ್ಕಿಸದೆ ಜೋಡಿ ಸರಸದಲ್ಲಿ ತಲ್ಲೀನವಾಗಿದೆ. ಇದೇ ವೇಳೆ ಪಿಎಸ್ಐ ಮಹೇಶ್ ಅವರು ಮನೆಗೆ ಬಂದು ಊಟ ಮಾಡಿ ಹೊರಗೆ ಬಂದಾಗ ಪಾರ್ಕಿನ ಬಳಿ ಒಂದು ಕಾರು ನಿಂತುಕೊಂಡು ಅಲುಗಾಡುತ್ತಿತ್ತು. ಇದನ್ನು ಗಮನಿಸಿ ಕಾರಿನ ಬಳಿ ಬಂದು ನೋಡಿದಾಗ ಯುವಕ ಹಾಗೂ ಯುವತಿ ಇಬ್ಬರೂ ಕಾರಿನ ಹಿಂಬದಿ ಸೀಟಿನಲ್ಲಿ ಕಾಮತೃಷೆ ತೀರಿಸಿಕೊಳ್ಳುವುದು ಕಣ್ಣಿಗೆ ಬಿದ್ದಿದೆ.

ಇದೇ ರಸ್ತೆಯಲ್ಲಿ ಶಾಲಾ ಮಕ್ಕಳು, ಮಹಿಳೆಯರು ಅಡ್ಡಾಡುವ ರಸ್ತೆಯಾಗಿದ್ದು, ಅವರಿಗೆ ಮುಜುಗರ ಉಂಟಾಗುವುದನ್ನು ತಪ್ಪಿಸುವ ಉದ್ದೇಶದಿಂದ ಪಿಎಸ್ಐ ಮಹೇಶ್ ಅವರು ಕಾರಿನಲ್ಲಿದ್ದವರಿಗೆ ಬುದ್ಧಿ ಹೇಳಲು ಮುಂದಾಗಿದ್ದಾರೆ. ಕಾರಿನ ಬಳಿ ಹೋಗಿ ನಂಬರ್ ಪ್ಲೇಟ್ ಪರಿಶೀಲನೆ ನಡೆಸಿದ್ದಾರೆ. ಅಷ್ಟರಲ್ಲಿ ಎಚ್ಚೆತ್ತುಕೊಂಡ ಯುವಕ ಏಕಾಏಕಿ ಕಾರು ಚಲಾಯಿಸಿದ್ದಾನೆ. ದಿಢೀರ್ ಕಾರು ಚಲಿಸಲು ಆರಂಭಿಸಿದ ಕಾರಣ ಸಬ್ ಇನ್ಸ್​​ಪೆಕ್ಟರ್ ಮಹೇಶ್ ಬಾನೆಟ್ ಮೇಲೆ ಬಿದ್ದಿದ್ದಾರೆ. ಅವರು ಕಾರಿನ ಬಾನೆಟ್ ಹಿಡಿದುಕೊಂಡು ಒದ್ದಾಡುತ್ತಿದ್ದರೂ ಲೆಕ್ಕಿಸದ ಯುವಕ ಕಾರು ಚಲಾಯಿಸಿದ್ದಾನೆ. ಏಕಾಏಕಿ ಕಾರನ್ನು ರಿವರ್ಸ್ ತೆಗೆದು ಒಮ್ಮೆಲೆ ಚಲಾಯಿಸಿದ್ದಾನೆ. ಪರಿಣಾಮವಾಗಿ ಕೆಳಗೆ ಬಿದ್ದ ಸಬ್ ಇನ್ಸ್​​ಪೆಕ್ಟರ್ ತಲೆಗೆ ಗಾಯವಾಗಿ ಮೂರ್ಛೆ ತಪ್ಪಿ ಬಿದ್ದಿದ್ದಾರೆ. ಅಲ್ಲಿದ್ದ ಸ್ಥಳೀಯರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನಂತರವೇ ಅವರಿಗೆ ಎಚ್ಚರವಾಗಿದೆ.

ಸದ್ಯ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಮಹೇಶ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.