ಮಠದ ಸ್ವಾಮಿಗಳು ಅಂದರೆ ನನಗೆ ದೇವರಿದ್ದಂತೆ : ಈಶ್ವರಪ್ಪ.

62
firstsuddi

ಶಿವಮೊಗ್ಗ : ಮಠದ ಸ್ವಾಮಿಗಳು ಅಂದರೆ ನನಗೆ ದೇವರಿದ್ದಂತೆ. ಮುರುಘಾ ಶ್ರೀ ಬಗ್ಗೆ ನನಗೆ ಗೌರವ ಕಡಿಮೆ ಆಗಿಲ್ಲ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಮುರುಘಾ ಶ್ರೀ ಬಂಧನ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುರುಘಾ ಮಠಾಧೀಶರ ಬಗ್ಗೆ ನನಗೆ ಗೌರವವಿದೆ. ತನಿಖೆ ನಡೆಯುತ್ತಿದೆ ಸತ್ಯವೋ ಸುಳ್ಳೋ ಹೊರಗೆ ಬರಲಿ. ಒಂದೇ ಸಲಕ್ಕೆ ತೀರ್ಮಾನಕ್ಕೆ ಬರುವುದು ಬೇಡ, ಇಡೀ ದೇಶದಲ್ಲಿ ಮಠಮಂದಿರಗಳು ಜನರಲ್ಲಿ ಭಕ್ತಿಯನ್ನು ಹೆಚ್ಚಿಸುವ ಧಾರ್ಮಿಕ ಕೇಂದ್ರಗಳು. ಮುರುಘಾ ಮಠಾಧೀಶರ ಬಗ್ಗೆ ಕೇಳಿಬಂದಿರುವ ಆರೋಪ ಸುಳ್ಳಾಗಲಿ ಎಂದು ಆಶಿಸುತ್ತೇನೆ ಎಂದರು.

ಇದೇ ವೇಳೆ ರಾಜ್ಯಕ್ಕೆ ಮೋದಿ ಭೇಟಿ ನೀಡಿದ ವಿಚಾರವಾಗಿ ಮಾತನಾಡಿದ ಅವರು, ಬಿಜೆಪಿಗೆ ಜನ ಬೆಂಬಲ ಕೊಡುತ್ತಿರುವುದಕ್ಕೆ ನಿನ್ನೆಯ ಕಾರ್ಯಕ್ರಮ ಸಾಕ್ಷಿಯಾಗಿದೆ. ಮೋದಿ ಎಲ್ಲಿ ಬರುತ್ತಾರೋ ಅಲ್ಲಿ ಜನರ ಸಂಚಲನ ಇರುತ್ತದೆ. ಜನಜಾಗೃತಿ ಮೂಡಿಸಿ ದೇಶಭಕ್ತಿ ಮೂಡಿಸುವ ಪ್ರತೀಕ ಅಂದರೆ ಮೋದಿ. ಮೋದಿ ಭೇಟಿಯಲ್ಲಿ ಚುನಾವಣೆ ವಿಚಾರ ಬರಲೇ ಇಲ್ಲ. ಅವರ ಭಾಷಣದಲ್ಲಿ ಒಂದೇ ಒಂದು ರಾಜಕೀಯ ವಿಷಯ ಇರಲಿಲ್ಲ. ಅಭಿವೃದ್ಧಿ ಕಾರ್ಯದ ಬಗ್ಗೆ ಭಾಷಣ ಮಾಡಿದರು. ಇಂತಹ ನಿಜವಾದ ರಾಷ್ಟ್ರ ಭಕ್ತನನ್ನು ಪಡೆದದ್ದು ನಮ್ಮ ಪುಣ್ಯ. ಅವರು ರಾಜ್ಯಕ್ಕೆ ಭೇಟಿ ನೀಡಿದ್ದು ನಮಗೆಲ್ಲಾ ಸ್ಫೂರ್ತಿ ತುಂಬಿದೆ. ನಮ್ಮ ಬಲಗೈಗೆ ಶಕ್ತಿ ಬಂದಂತಾಗಿದೆ ಎಂದು ಹೇಳಿದ್ದಾರೆ.