ಮದುವೆಗೆ ನಿರಾಕರಣೆ: ಪ್ರಿಯಕರನನ್ನೇ ಕೊಡಲಿಯಿಂದ ಕೊಚ್ಚಿ ಕೊಲೆಗೈದ ಯುವತಿ…

61
firstsuddi

ರಾಂಚಿ: ಮದುವೆಯಾಗಲು ನಿರಾಕರಿಸಿದ್ದಕ್ಕೆ ಯುವತಿಯೊಬ್ಬಳು ತನ್ನ ಪ್ರಿಯಕರನನ್ನು ಕೊಡಲಿಯಿಂದ ಕೊಚ್ಚಿ ಕೊಲೆಗೈದ ಘಟನೆ ಜಾರ್ಖಂಡ್‌ನ ಕೊಲ್ಹುವಾ ಎಂಬಲ್ಲಿ ನಡೆದಿದೆ.

ಕೊಲೆಗೈದ ಯುವತಿಯನ್ನು ಅಂಜಲಿ (20) ಎಂದು ಗುರುತಿಸಲಾಗಿದೆ. ಧರ್ಮನ್ ಓರಾನ್ (24) ಕೊಲೆಯಾದ ಯುವಕ ಎಂದು ತಿಳಿದು ಬಂದಿದೆ. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇತ್ತೀಚೆಗೆ ಮದುವೆ ವಿಚಾರ ಬಂದಾಗ ಯುವಕ ನಿರಾಕರಿಸಿದ್ದ. ಇದೇ ಕಾರಣಕ್ಕೆ ಯುವತಿ ಆತನನ್ನು ಕೊಲೆಗೈದಿದ್ದಾಳೆ.

ಅಂಜಲಿ ಕೊಲೆಗೆ ಯೋಜನೆ ರೂಪಿಸಿ ಮಾತನಾಡುವ ನೆಪ ಹೇಳಿ ಧರ್ಮನ್‍ನನ್ನು ನಿರ್ಜನ ಪ್ರದೇಶಕ್ಕೆ ಕರೆಸಿದ್ದಳು. ಸ್ವಲ್ಪ ಹೊತ್ತು ಹರಟೆ ಹೊಡೆದ ನಂತರ ಧರ್ಮನ್ ನೆಲದ ಮೇಲೆ ನಿದ್ರೆಗೆ ಜಾರಿದ್ದಾನೆ. ಈ ವೇಳೆ ಮೊದಲೇ ತಂದಿಟ್ಟಿದ್ದ ಕೊಡಲಿಯಿಂದ ಆತನನ್ನು ಹತ್ಯೆಗೈದಿದ್ದಳು. ಬಳಿಕ ಶವವನ್ನು ಪೊದೆಯಲ್ಲಿ ಮುಚ್ಚಿಟ್ಟು ಪರಾರಿಯಾಗಿದ್ದಳು.

ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಆಕೆಯ ರಕ್ತದ ಕಲೆಯುಳ್ಳ ಬಟ್ಟೆ ಮತ್ತು ಕೊಲೆಗೆ ಬಳಸಿದ ಕೊಡಲಿಯನ್ನು ವಶಪಡಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.