ಮದುವೆಯಾದ ಮೂರೇ ದಿನಕ್ಕೆ ಪತ್ನಿ ಬಿಟ್ಟು ಪರಾರಿಯಾದ ಪತಿ!

57
firstsuddi

ಬೆಂಗಳೂರು : ಪತಿಯೊಬ್ಬ ಮದುವೆಯಾಗಿ ಮೂರೇ ದಿನಕ್ಕೆ ಹೆಂಡತಿಯನ್ನು ಬಿಟ್ಟು ಪರಾರಿಯಾಗಿದ್ದಾನೆ.

ಈ ಬಗ್ಗೆ ಪತ್ನಿ ಕೆ.ಆರ್ ಪುರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಸುರೇಶ್ ನನ್ನು ವಿಚಾರಣೆ ಮಾಡಿದ್ದಾರೆ. ಈ ವೇಳೆ ಮದುವೆ ಪೋಟೋಗಳ ಬಗ್ಗೆ ಸುರೇಶ್ ನನ್ನು ಕೇಳಿದ್ರೆ, ನಾನು ಧರಣಿಯನ್ನು ಮದುವೆಯಾಗಿಲ್ಲ. ನಾವಿಬ್ಬರು ಸ್ನೇಹಿತರಾಗಿದ್ದೆವು. ಅದು ಶಾರ್ಟ್ ಮೂವಿಗಾಗಿ ತೆಗೆದ ಫೋಟೋ ಆಗಿತ್ತು. 2016ರಲ್ಲಿ ಧರಣಿಗೆ ಮೊದಲ ವಿವಾಹ ಆಗಿತ್ತು.  ಪತಿಯನ್ನು ಬಿಟ್ಟು ದೂರವಾಗಿದ್ದರು ಎಂದು ಆರೋಪಿಸಿದ್ದಾನೆ. ಸದ್ಯ ಪ್ರಕರಣದ ತನಿಖೆ ಮುಂದುವರೆದಿದೆ.

ಕಳೆದ ಒಂದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದ ಧರಣಿ ಮತ್ತು ಸುರೇಶ್ ಫೆ.15ರಂದು ಮದುವೆ ಆಗಿದ್ದರು. ಆದರೆ ಮದುವೆಯಾಗಿ ಮೂರೇ ದಿನಕ್ಕೆ ಪತಿ ಸುರೇಶ್ ಪರಾರಿಯಾಗಿದ್ದಾನೆ. ಧರಣಿಗೆ 2016ರಲ್ಲಿ ಮದುವೆಯಾಗಿತ್ತು. ನಂತರ ಪತಿಯಿಂದ ದೂರವಾಗಿದ್ದಳು. ಈ ಎಲ್ಲಾ ವಿಚಾರಗಳು ಸುರೇಶ್ ಗೂ ತಿಳಿಸಿದ್ದ ಧರಣಿ ಬಳಿಕ ಆತನನ್ನು ಪ್ರೀತಿಸಿ ಮದುವೆಯಾಗಿದ್ದಳು ಎಂದು ತಿಳಿದುಬಂದಿದೆ.