ಅಮರಾವತಿ: ಮದ್ಯ ಕೊಡಲು ನಿರಾಕರಿಸಿದ್ದಕ್ಕೆ ವ್ಯಕ್ತಿಯೊಬ್ಬ ವೈನ್ಶಾಪ್ಗೆ ಬೆಂಕಿ ಹಚ್ಚಿರುವ ಘಟನೆ ನಿನ್ನೆ ವಿಶಾಖಪಟ್ಟಣಂನ ಮಧುರವಾಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವೈನ್ಶಾಪ್ಗೆ ಬೆಂಕಿ ಹಚ್ಚಿದ ವ್ಯಕ್ತಿಯನ್ನು ಪೊಲೀಸರು ಇದೀಗ ಬಂಧಿಸಿದ್ದಾರೆ.
ಆರೋಪಿಯನ್ನು ಮಧು ಎಂದು ಗುರುತಿಸಲಾಗಿದೆ. ಆತ ಮಧುವಾಡ ಬಡಾವಣೆಯ ವೈನ್ಶಾಪ್ಗೆ ಬಂದಿದ್ದ. ವೈನ್ ಶಾಪ್ ಮುಚ್ಚುವ ಸಮಯವಾಗಿದ್ದರಿಂದ ಶಾಪ್ ಸಿಬ್ಬಂದಿ ಮದ್ಯ ನೀಡಲು ನಿರಾಕರಿಸಿದ್ದಾರೆ. ಇದರಿಂದ ಆರೋಪಿ ಹಾಗೂ ಸಿಬ್ಬಂದಿ ನಡುವೆ ವಾಗ್ವಾದ ಉಂಟಾಗಿದೆ. ಬಳಿಕ ಆತನಿಗೆ ಎಚ್ಚರಿಕೆ ನೀಡಿದ ಬಳಿಕ ಆತ ಅಲ್ಲಿಂದ ತೆರಳಿದ್ದಾನೆ.
ನಿನ್ನೆ ಸಂಜೆ ಪೆಟ್ರೋಲ್ನೊಂದಿಗೆ ಅಂಗಡಿಗೆ ಮರಳಿದ ಮಧು ಅಂಗಡಿಯೊಳಗೆ ಮತ್ತು ಸಿಬ್ಬಂದಿಯ ಮೇಲೂ ಪೆಟ್ರೋಲ್ ಸುರಿದು ತಕ್ಷಣ ಬೆಂಕಿ ಹಚ್ಚಿದ್ದಾನೆ. ಸಿಬ್ಬಂದಿ ಅಂಗಡಿಯಿಂದ ಓಡಿಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ, ಆದರೆ ಅಂಗಡಿ ಸುಟ್ಟುಹೋಗಿದೆ ಮತ್ತು ಕಂಪ್ಯೂಟರ್ ಮತ್ತು ಪ್ರಿಂಟರ್ ಸೇರಿದಂತೆ 1.5 ಲಕ್ಷಕ್ಕೂ ಹೆಚ್ಚು ಮೌಲ್ಯದ ಆಸ್ತಿ ಹಾನಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದೀಗ ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಆತನ ವಿರುದ್ಧ ಐಪಿಸಿ ಸೆಕ್ಷನ್ 307 ಮತ್ತು 436 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಇನ್ಸ್ ಪೆಕ್ಟರ್ ರಾಮ ಕೃಷ್ಣ ತಿಳಿಸಿದ್ದಾರೆ.










