ಮದ್ಯ ಸೇವನೆ ವಯಸ್ಸಿನ ಮಿತಿ 25ರಿಂದ 21 ವರ್ಷಕ್ಕೆ ಇಳಿಕೆ : ಹರಿಯಾಣ ಸರ್ಕಾರ.

65
firstsuddi

ಚಂಡೀಗಢ : ಹರಿಯಾಣ ಸರ್ಕಾರವು ಮದ್ಯಸೇವನೆ ವಯಸ್ಸನ್ನು 25 ವರ್ಷದಿಂದ 21 ವರ್ಷಕ್ಕೆ ಇಳಿಸಿದೆ. ಬುಧವಾರ ಹರಿಯಾಣ ಅಬಕಾರಿ (ತಿದ್ದುಪಡಿ) ಮಸೂದೆ- 2021 ಅನ್ನು ರಾಜ್ಯ ವಿಧಾನಸಭೆಯಲ್ಲಿ ಅಂಗೀಕರಿಸಲಾಯಿತು. ಅಬಕಾರಿ ಖಾತೆಯನ್ನೂ ಹೊಂದಿರುವ ಉಪಮುಖ್ಯಮಂತ್ರಿ ದುಷ್ಯಂತ್ ಚೌತಾಲ್ ಅವರು ಮಸೂದೆ ಮಂಡಿಸಿದರು.

ಈ ಹಿಂದೆ ಹರಿಯಾಣದಲ್ಲಿ 25 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಗೆ ಮದ್ಯ ಖರೀದಿಸಲು ಅಥವಾ ಮಾರಾಟ ಮಾಡಲು ಅವಕಾಶವಿರಲಿಲ್ಲ. ಈ ಕಾಯ್ದೆಯ ತಿದ್ದುಪಡಿಯಿಂದಾಗಿ 21 ವರ್ಷ ಮೇಲ್ಪಟ್ಟವರು ಮದ್ಯ ಖರೀದಿಸಲು, ಮಾರಾಟ ಮಾಡಲು ಮತ್ತು ಸೇವನೆಗೆ ಅವಕಾಶ ಕಲ್ಪಿಸಲಾಗಿದೆ. ಕೆಲವು ರಾಜ್ಯಗಳು ಕಡಿಮೆ ವಯಸ್ಸನ್ನು ಸೂಚಿಸಿರುವ ಕಾರಣದಿಂದ ವಯಸ್ಸಿನ ಮಿತಿಯನ್ನು 25 ವರ್ಷದಿಂದ 21 ವರ್ಷಕ್ಕೆ ಇಳಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ.

ಇತ್ತೀಚೆಗಷ್ಟೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಮದ್ಯ ಸೇವನೆ ವಯಸ್ಸಿನ ಮಿತಿಯನ್ನು 21 ವರ್ಷಕ್ಕೆ ಇಳಿಸಿತ್ತು.