‘ಮಧುಬನ್’ ಹಾಡಿಗೆ ಹೆಜ್ಜೆ ಹಾಕಿ ಪುರೋಹಿತರ ಕೆಂಗಣ್ಣಿಗೆ ಗುರಿಯಾದ ಹಾಟ್ ಬ್ಯೂಟಿ ಸನ್ನಿ ಲಿಯೋನ್.

90
firstsuddi

ಮುಂಬೈ : ಬಾಲಿವುಡ್ ನಟಿ ಸನ್ನಿ ಲಿಯೋನ್ ಅವರು ಇತ್ತಿಚೀನ ಆಲ್ಬಮ್ ಸಾಂಗ್ ನಲ್ಲಿ ಮಾಡಿರುವ ನೃತ್ಯ ಇದೀಗ ಮಥುರಾ ಅರ್ಚರಕರ ಆಕ್ರೋಶಕ್ಕೆ ಕಾರಣವಾಗಿದೆ.

ಮಧುಬನ್ ಮೇ ರಾಧಿಕಾ ನಾಚೆ ಎಂಬ ಹಾಡಿಗೆ ಸನ್ನಿ ಲಿಯೋನ್ ನೃತ್ಯ ಮಾಡಿದ್ದಾರೆ. ಆದರೆ ಈ ಹಾಡಿನಲ್ಲಿ ಸನ್ನಿ ಲಿಯೋನ್ ಮಾಡಿರುವ ನೃತ್ಯದ ಕುರಿತಾಗಿ ಆಕ್ಷೇಪ ವ್ಯಕ್ತವಾಗುತ್ತಿದೆ. ಈ ಹಾಡು ರಾಧಾ ಮತ್ತು ಕೃಷ್ಣನ ನಡುವಿನ ಪ್ರೀತಿಯನ್ನು ವಿವರಿಸುವ ಸಾಹಿತ್ಯವನ್ನು ಹೊಂದಿದೆ. ಇಂತಹ ಹಾಡಿಗೆ ಸನ್ನಿ ಸ್ಟೆಪ್ ಹಾಕಿರುವುದು ಹಿಂದೂಗಳ ಭಾವನೆಗೆ ಧಕ್ಕೆ ತರುತ್ತಿದೆ ಎಂದು ಹಲವು ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ.

ಅಲ್ಲದೆ, ಸನ್ನಿ ಲಿಯೋನ್ ಅವರ ಈ ವೀಡಿಯೋ ಆಲ್ಬಮ್ ನಿಷೇಧಿಸಬೇಕು ಹಾಗೂ ಸರ್ಕಾರ ಈ ವಿಡಿಯೋವನ್ನು ನಿಷೇಧಿಸದಿದ್ದರೆ ನ್ಯಾಯಾಲಯದ ಮೊರೆ ಹೋಗುತ್ತೇವೆ. ನೃತ್ಯದ ಭಾಗವಿರುವ ವೀಡಿಯೋವನ್ನು ಹಿಂಪಡೆದು ಸಾರ್ವಜನಿಕವಾಗಿ ಕ್ಷಮೆ ಕೋರುವವರೆಗೆ ಭಾರತದಲ್ಲಿರಲು ಆಕೆಗೆ ಅವಕಾಶ ನೀಡಬಾರದು ಎಂದು ಬೃಂದಾವನದ ಸಂತ್ ನವಲ್ ಗಿರಿ ಮಹಾರಾಜ್ ಆಗ್ರಹಿಸಿದ್ದಾರೆ.