ಮಧ್ಯಪ್ರದೇಶದಲ್ಲಿ ಸುಖೋಯ್-30, ಮಿರಾಜ್-2000 ಯುದ್ಧ ವಿಮಾನಗಳು ಪತನ…

41
firstsuddi

ಭೋಪಾಲ್ : ಭಾರತದ ವಾಯು ಸೇನೆಯ ವಿಮಾನಗಳಾದ ಸುಖೋಯ್-30 ಮತ್ತು ಮಿರಾಜ್ 2000 ವಿಮಾನಗಳು ಪತನಗೊಂಡಿದೆ.

ಎರಡು ವಿಮಾನಗಳು ಮಧ್ಯಪ್ರದೇಶದ ಗ್ವಾಲಿಯರ್ ವಾಯು ನೆಲೆಯಿಂದ ತಾಲೀಮು ನಡೆಸುತ್ತಿದ್ದವು. ಆಗಸದಲ್ಲಿ ಹಾರಾಟ ನಡೆಸುತ್ತಿದ್ದಂತೆ ಡಿಕ್ಕಿ ಹೊಡೆದುಕೊಂಡು ಮಧ್ಯಪ್ರದೇಶದ ಮೊರೆನಾ ಬಳಿ ಪತನಗೊಂಡಿದೆ.

ಈ ಅಪಘಾತವು ಬೆಳಗ್ಗೆ 5:30ಕ್ಕೆ ಸಂಭವಿಸಿದೆ. ಎರಡೂ ವಿಮಾನಗಳಿಂದ ಪೈಲಟ್ ಗಳು ಸುರಕ್ಷಿತವಾಗಿ ಎಜೆಕ್ಟ್ ಆಗಿದ್ದಾರೆ ಎಂದು ಹೇಳಲಾಗಿದೆ. ಯುದ್ದ ವಿಮಾನಗಳು ಪತನಗೊಂಡಿರುವ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ. ಈ ಎರಡು ಯುದ್ಧ ವಿಮಾನಗಳ ನಡುವೆ ವಾಯು ಘರ್ಷಣೆ ಸಂಭವಿಸಿದೆಯೇ ಅಥವಾ ಇಲ್ಲವೇ ಎಂಬುದನ್ನು ಪತ್ತೆ ಮಾಡಲು ಐಎಎಫ್ ತನಿಖೆಗೆ ಸೂಚಿಸಿದೆ.