ಮನೆಗೆ ನುಗ್ಗಿದ ಮಳೆ ನೀರು ಹೊರಹಾಕುವ ವೇಳೆ ವಿದ್ಯುತ್ ಶಾಕ್ – ವ್ಯಕ್ತಿ ಸಾವು…

81
firstsuddi

ಬೆಂಗಳೂರು : ನಗರದಲ್ಲಿ ಕೆಲ ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಅವಾಂತರ ಸೃಷ್ಟಿಯಾಗುತ್ತಿವೆ. ನಿನ್ನೆ ಸುರಿದ ಭಾರಿ ಮಳೆಗೆ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ. ಕೆ.ಪಿ.ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವೆಂಕಟೇಶ್(56) ಮೃತ ವ್ಯಕ್ತಿ. ನಿನ್ನೆ ಸುರಿದ ಮಳೆಗೆ ವೆಂಕಟೇಶ್ ಮನೆಗೆ ನೀರು ನುಗ್ಗಿದೆ. ಈ ನೀರು ಹೊರಹಾಕುವ ವೇಳೆ ವಿದ್ಯುತ್ ಶಾಕ್ ಹೊಡೆದು ಮೃತಪಟ್ಟಿದ್ದಾರೆ. ಮನೆಯಲ್ಲಿ ಗಂಡ-ಹೆಂಡತಿ ಮಾತ್ರ ವಾಸವಿದ್ದರು. ಸ್ಥಳಕ್ಕೆ ಕೆ.ಪಿ. ಅಗ್ರಹಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.