ಮನೆಯಲ್ಲೇ ಕೊವಿಡ್ ಟೆಸ್ಟ್ ಮಾಡಿಕೊಳ್ಳಬಹುದು ; ಎಂಐಸಿಆರ್ ನಿಂದ ರ‍್ಯಾಪಿಡ್ ಟೆಸ್ಟ್ ಕಿಟ್ ಗೆ ಅನುಮೋದನೆ…

121
firstsuddi

ನವದೆಹಲಿ : ಕೊರೊನಾ ರೋಗಲಕ್ಷಣಗಳನ್ನು ಹೊಂದಿರುವವರು ಇನ್ನು ಮುಂದೆ ಮನೆಯಲ್ಲೇ ಕೋವಿಡ್ ಟೆಸ್ಟ್ ಮಾಡಿಕೊಳ್ಳಬಹುದು. ರ‍್ಯಾಪಿಡ್ ಆ್ಯಂಟಿಜೆನ್ ಬಳಸಲು ಐಸಿಎಂಆರ್ ಅನುಮೋದನೆ ನೀಡಿದೆ. ‘ಕೋವಿಸೆಲ್ಫ್’ ಹೆಸರಿನ ರ‍್ಯಾಪಿಡ್ ಆ್ಯಂಟಿಜೆನ್ ಕಿಟ್ ಅನ್ನು ಪುಣೆಯ ಮೈಲಾಬ್ ಡಿಸ್ಕವರಿ ಸೊಲ್ಯೂಷನ್ಸ್ ಲಿಮಿಟೆಡ್ ತಯಾರಿಸಿದೆ. ಈ ವಿಧಾನದ ಪರೀಕ್ಷೆಗೆ ಕೇವಲ ಮೂಗಿನ ದ್ರವ ಮಾತ್ರ ಅಗತ್ಯವಾಗಿದೆ.

ಕೊರೊನಾ ಪಾಸಿಟಿವ್ ದೃಢಪಟ್ಟ ರೋಗಿಗಳ ಜೊತೆ ಪ್ರಾಥಮಿಕ ಸಂಪರ್ಕದಲ್ಲಿದ್ದವರು ಮನೆಯಲ್ಲಿಯೇ ರ‍್ಯಾಪಿಡ್ ಆ್ಯಂಟಿಜನ್ ಟೆಸ್ಟ್ ಅನ್ನು ಕಿಟ್ ಬಳಸಿ ಮಾಡಬಹುದು. ಕಿಟ್ ಬಳಸುವುದಕ್ಕಾಗಿ, ಬಳಕೆದಾರರಿಗೆ ಮೊಬೈಲ್ ಅಪ್ಲಿಕೇಶನ್ ಅಗತ್ಯವಿರುತ್ತದೆ, ಇದು ಪರೀಕ್ಷಾ ಕಾರ್ಯವಿಧಾನದ ಸಮಗ್ರ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ರೋಗಿಗೆ ಪಾಸಿಟಿವ್ ಅಥವಾ ನೆಗೆಟಿವ್ ಫಲಿತಾಂಶವನ್ನು ನೀಡುತ್ತದೆ.

ಆದರೆ ನೆಗೆಟಿವ್ ವರದಿ ಪಡೆದ ರೋಗಲಕ್ಷಣ ಹೊಂದಿರುವವರು ಕ್ಷಣವೇ ಆರ್ ಟಿಪಿಸಿಆರ್ ಪರೀಕ್ಷೆಗೆ ಒಳಗಾಗುವಂತೆ ಶಿಫಾರಸು ಮಾಡಲಾಗಿದೆ, ಏಕೆಂದರೆ “ಕಡಿಮೆ ವೈರಲ್ ಸೋಂಕಿನ ಗುಣಲಕ್ಷಣದೊಡನೆ ಪ್ರಸ್ತುತಪಡಿಸುವ ಕೆಲವು ಪಾಸಿಟಿವ್ ಪ್ರಕರಣಗಳು ತಪ್ಪಿಹೋಗುವ ಸಾಧ್ಯತೆ ಇದೆ.”

ಈ ಕಿಟ್ ಬೇಕಾಬಿಟ್ಟಿ ಬಳಕೆ ಮಾಡುವಂತಿಲ್ಲ. ಯಾರಲ್ಲಿ ಕೊರೊನಾ ಲಕ್ಷಣ ಇದೆ ಹಾಗೂ ಯಾರು ಕೊರೊನಾ ಸೋಂಕಿತರ ಪ್ರಾಥಮಿಕ ಸಂಪರ್ಕ ಹೊಂದಿದ್ದಾರೆಯೋ ಅಂಥವರು ಮಾತ್ರ ಈ ಕಿಟ್ ಅನ್ನು ಬಳಸಬೇಕು ಎಂದು ಆರೋಗ್ಯ ಸಂಶೋಧನಾ ಸಂಸ್ಥೆ ಹೇಳಿದೆ.