ಮರಿಯಮ್ಮನಹಳ್ಳಿ- ರಂಗದಿಗ್ಗಜ ಕೋಗಳಿ ಪಂಪಣ್ಣರು ನಡೆದಾಡುವ ವಿಶ್ವಕೋಶವಾಗಿದ್ದರು: ಎಂ .ಎಂ. ಶಿವಪ್ರಕಾಶ್

214
First suddi

ಮರಿಯಮ್ಮನಹಳ್ಳಿ: ವೃತಿರಂಗಭೂಮಿಯು ಕನ್ನಡ ರಂಗಭೂಮಿಯನ್ನು ಬಹುದೂರದ ಲಂಡನ್‍ವರೆಗೂ ತಲುಪಿಸಿದ ರಂಗಸಂಸ್ಕøತಿಯ ಕೀರ್ತಿ ಬಳ್ಳಾರಿ ಜಿಲ್ಲೆಯ ರಂಗಭೂಮಿಗೆ ಸಲ್ಲುತ್ತದೆ ಎಂದು ಸಾಹಿತಿ ಎಂ.ಎಂ. ಶಿವಪ್ರಕಾಶ್ ಹೇಳಿದರು.

ಅವರು ಮರಿಯಮ್ಮನಹಳ್ಳಿಯ ದುರ್ಗಾದಾಸ್ ಕಲಾಮಂದಿರದಲ್ಲಿ ಬಳ್ಳಾರಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಪ.ಪಂ.ದ ಪ್ರಾಯೋಜಿತ ಕಾರ್ಯಕ್ರಮದಲ್ಲಿ ಮಾರುತಿ ಕಲಾರಂಗದವರು ಹಮ್ಮಿಕೊಂಡಿದ್ದ ನಾಡೋಜ ಡಾ ಸುಭದ್ರಮ್ಮ ಮನ್ಸೂರು ಮತ್ತು ರಂಗದಿಗ್ಗಜ ಕೋಗಳಿ ಪಂಪಣ್ಣರ ಸ್ಮರಣಾರ್ಥ ಜಾನಪದ ಸಂಗೀತ ಮತ್ತು ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ರಂಗದಿಗ್ಗಜ ಕೋಗಳಿ ಪಂಪಣ್ಣರು ನಡೆದಾಡುವ ವಿಶ್ವಕೋಶವಾಗಿದ್ದರು. ಕನ್ನಡ ಸಾಹಿತ್ಯವನ್ನು ಸಾಕಷ್ಟು ಓದಿಕೊಂಡಿದ್ದು, ವಿಶ್ವವಿದ್ಯಾಲಯದ ಪ್ರಾಧ್ಯಾಪಕರ ರೀತಿಯಲ್ಲಿ ಯಾವುದೇ ವಿಷಯದಲ್ಲಿ ಮಾತನಾಡುವಂತಹ ಅಗಾಧ ಪ್ರೌಡಿಮೆಯನ್ನು ಹೊಂದಿದ್ದರು. ಅವರು ಮೂರು ನಾಟಕಗಳನ್ನು ರಚಿಸಿದ್ದು, ಅನೇಕ ನಾಟಕಗಳಲ್ಲಿ ಅಭಿನಯಿಸುವ ಮೂಲಕ ಉತ್ತಮ ಕಲಾವಿದರಾಗಿಯೂ ಪ್ರಸಿದ್ಧಿ ಹೊಂದಿದ್ದರು. ರಕ್ತರಾತ್ರಿ ನಾಟಕದಲ್ಲಿ ಶ್ರೀಕೃಷ್ಣನ ಪಾತ್ರ ಹೊರತುಪಡಿಸಿ ನಾಟಕದ ಎಲ್ಲಾ ಪಾತ್ರಗಳನ್ನು ಅಭಿನಯಿಸುವ ಮೂಲಕ ಸೈ ಎನಿಸಿಕೊಂಡಿದ್ದರು ಎಂದು ಅಭಿಪ್ರಾಯಪಟ್ಟರು.
ಕೋಗಳಿ ಪಂಪಣ್ಣರು ವೃತಿರಂಗಭೂಮಿಗೆ ನೀಡಿರುವ ಕೊಡುಗೆ ಅಪಾರವಾದದ್ದು. ಗ್ರಾಮೀಣ ಪ್ರದೇಶಗಳಲ್ಲಿ ಹವ್ಯಾಸಿ ಮತ್ತು ವೃತ್ತಿರಂಗಭೂಮಿಯ ಅಸ್ಮಿತೆಯನ್ನು ಬೆಳಸಿದವರು. ಅಲ್ಲದೇ ವೃತ್ತಿರಂಗಭೂಮಿಯನ್ನ ದೇಶಿಯ ನೆಲೆಯಲ್ಲಿ ಕಟ್ಟಿ ಬೆಳಸಿದವರಾಗಿದ್ದು, ಜೊತೆಗೆ ನಟನ ಪರಂಪರೆ, ರಂಗಸಂಗೀತ ಪರಂಪರೆ, ರಂಗಸಜ್ಜಿಕೆ, ಪ್ರೇಕ್ಷಕ ಪರಂಪರೆಯನ್ನು ಬೆಳಸಿದವರಾಗಿದ್ದಾರೆ.

ಹಿರಿಯ ರಂಗಕರ್ಮಿ ಅಂಜಿನಪ್ಪ ಗುಂಡಗತ್ತಿ ಅವರು ಮಾತನಾಡಿ, ಮರಿಯಮ್ಮನಹಳ್ಳಿಯಲ್ಲಿ ಸಾಕಷ್ಟು ಕಲಾವಿದರನ್ನು ಹೊಂದಿರುವುದರಿಂದ ಕಲಾವಿದರ ಕಾಶಿಯಾಗಿದೆ. ಸುಭದ್ರಮ್ಮ ಮನ್ಸೂರು ಅವರು ರಂಗಭೂಮಿಗೆ ಬರದೇ ಇದ್ದಿದ್ದರೆ ರಂಗಭೂಮಿಗೆ ನಷ್ಟವಾಗುತ್ತಿತ್ತು. ಸುಭದ್ರಮ್ಮ ಅವರು ಯಾವುದೇ ನಾಟಕದಲ್ಲಿ ಅಭಿನಯಿಸಿದರೂ ಆ ಪಾತ್ರಕ್ಕೆ ಜೀವ ತುಂಬಿ ಅಭಿನಯಿಸುತ್ತಿದ್ದರು. ಅವರಲ್ಲಿರುವ ರಂಗಶಿಸ್ತು, ಸಮಯ ಪ್ರಜ್ಞೆ ಉಳಿದ ಕಲಾವಿದರಿಗೆ ಮಾದರಿಯಾಗಿದ್ದರು ಎಂದರು.
ಕಾರ್ಯಕ್ರಮವನ್ನು ಕಲಾವಿದ ಮತ್ತು ಕರ್ನಾಟಕ ನಾಟಕ ಅಕಾಡೆಮಿಯ ಪ್ರಶಸ್ತಿ ಪುರಸ್ಕøತ ಡಣಾನಾಯಕನಕೆರೆಯ ಡಿ.ಎಂ. ತೋಟಯ್ಯಸ್ವಾಮಿ ಉದ್ಘಾಟಿಸಿದರು. ರಂಗ ಕಲಾವಿದ ಆರ್. ಭರಮಲಿಂಗಪ್ಪ ಮಾಸ್ತರ್ ರಚಿಸಿರುವ ಆರ್.ಬಿ. ಕುಮಾರ್ ಸಂಪಾದಿಸಿರುವ ಚಂದ್ರಹಾಸ ನಾಟಕವನ್ನು ಹಿರಿಯ ರಂಗಕರ್ಮಿ ಮ.ಬ. ಸೋಮಣ್ಣ ಬಿಡುಗಡೆಗೊಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ.ಪಂ.ಅಧ್ಯಕ್ಷೆ ಬಿ.ಎಂ.ಎಸ್.ಕಾಂತಲತಾ ಪ್ರಕಾಶ್‍ವಹಿಸಿಕೊಂಡಿದ್ದರು. ನಾಟಕ ಅಕಾಡೆಮಿ ಸದಸ್ಯ ರಾಜಣ್ಣ, ವೈದ್ಯ ಡಾ. ಬಿ. ಅಂಬಣ್ಣ, ಕಸಾಪ ಬಳ್ಳಾರಿ ಜಿಲ್ಲಾ ಗೌರವ ಕಾರ್ಯದರ್ಶಿ ಎಂ.ಪಿ.ಎಂ. ಮಂಜುನಾಥ, ಸಾಹಿತಿ ಹಿ.ಮ.ಕೊಟ್ರಯ್ಯ, ಕಲಾವಿದ ಆರ್.ಬಿ. ಕುಮಾರ, ಮಾರುತಿ ಕಲಾರಂಗದ ಅಧ್ಯಕ್ಷ ಕೆ. ರಾಮಚಂದ್ರಪ್ಪ ಮುಖ್ಯಅತಿಥಿಗಳಾಗಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಹಿರಿಯ ಕಲಾವಿದೆ ಡಾ. ಕೆ. ನಾಗರತ್ನಮ್ಮ ಮತ್ತು ತಂಡದವರಿಂದ ಜಾನಪದ ಸಂಗೀತ ಕಾರ್ಯಕ್ರಮ ನಡೆಯಿತು. ನಾಲ್ವಡಿ ಶ್ರೀಕಂಠಶಾಸ್ತ್ರಿಗಳು ಮತ್ತು ಕಂದಗಲ್ಲ ಹನುಮಂತರಾಯ ರಚಿಸಿದ ಹೇಮರೆಡ್ಡಿ ಮಲ್ಲಮ್ಮ ಮತ್ತು ರಕ್ತರಾತ್ರಿ ನಾಟಕದ ದೃಶ್ಯಾವಳಿಗಳನ್ನು ವೀಣಾಕುಮಾರಿ, ಶಿವಕುಮಾರಿ, ಉಮಾರಾಣಿ, ಡಾ. ಕೆ. ನಾಗರತ್ನಮ್ಮ, ಕೆ. ಸರ್ವಮಂಗಳ, ಹನುಮಂತಪ್ಪ, ನಾಗರಾಜ, ಎಚ್. ಎಂ. ಶಶಿಧರ, ಕೆ. ದೊಡ್ಡ ಬಸಪ್ಪ ಕಲಾವಿದರು ಅಭಿನಯಿಸಿದರು.
ಕಾರ್ಯಕ್ರಮವನ್ನು ಮಹಾತೇಂಶ್ ಮತ್ತು ಸಂಗಡಿಗರು ಪ್ರಾರ್ಥಿಸಿ, ಡಾ. ಕೆ. ನಾಗರತ್ನಮ್ಮ ಸ್ವಾಗತಿಸಿದರು. ಎಚ್. ಉಮೇಶ್ ನಿರೂಪಿಸಿದರು.