ಮಲಯಾಳಂ ನಟಿ, ನಿರೂಪಕಿ ಸುಬಿ ಸುರೇಶ್ ವಿಧಿವಶ…

53
firstsuddi

ಮಲಯಾಳಂ ನಟಿ, ನಿರೂಪಕಿ ಸುಬಿ ಸುರೇಶ್(41) ಅವರು ನಿಧನರಾಗಿದ್ದಾರೆ.

ನಟಿ ಸುಬಿ ಲಿವರ್ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದರು. ಹಲವು ದಿನಗಳಿಂದ ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಸುಬಿ ಸುರೇಶ್ ಅವರು ಹಾಸ್ಯ ಕಲಾವಿದರಾಗಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದರು. ಬಳಿಕ ಸಿನಿಮಾಗಳಲ್ಲಿ ನಟಿಸುವ ಅವಕಾಶ ಅವರಿಗೆ ಸಿಕ್ಕಿತು. ಸುಬಿ ಸುರೇಶ್ ನಟಿಸಿದ ಮೊದಲ ಸಿನಿಮಾ ‘ಕನಕ ಸಿಂಹಾಸನಂ’. ಆ ಚಿತ್ರ 2006ರಲ್ಲಿ ತೆರೆಕಂಡಿತ್ತು. ಬಳಿಕ ‘ಹ್ಯಾಪಿ ಹಸ್ಬೆಂಡ್ಸ್’, ‘ಎಲ್ಸಮ್ಮ ಎನ್ನ ಅನ್ಕುಟ್ಟಿ’ ಮುಂತಾದ ಸಿನಿಮಾಗಳಲ್ಲಿ ಸುಬಿ ಸುರೇಶ್ ನಟಿಸಿದ್ದರು.

ಸುಬಿ ಅವರ ನಿಧನಕ್ಕೆ ಗಣ್ಯರು, ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.