ಮಳೆಗಾಲ ಪ್ರಾರಂಭವಾದರೆ ಸಾಕು ಮೂಡಿಗೆರೆಯಲ್ಲಿ ವಿದ್ಯುತ್ ಸಂಪೂರ್ಣ ಸ್ಥಗಿತ, ಸಾರ್ವಜನಿಕರ ಆಕ್ರೋಶ…

578
firstsuddi
ಮೂಡಿಗೆರೆ : ಕಾಫಿನಾಡು ಎಂದು ಪ್ರಸಿದ್ದಿ ಪಡೆದಿರುವ ಮೂಡಿಗೆರೆ ತಾಲ್ಲೂಕು ಗುಡ್ಡ ಗಾಡಿನಿಂದ ಕೂಡಿದ ಪ್ರದೇಶವಾಗಿದ್ದು, ಇಲ್ಲಿ ಮಳೆಗಾಲ ಬಂತೆಂದರೆ ಸಾಕು ಇಲ್ಲಿ ವಿದ್ಯುತ್ ಸಮಸ್ಯೆ ಕಟ್ಟಿಟ್ಟ ಬುತ್ತಿ. ಕಾಲಗಳಿಗೆ ತಕ್ಕಂತೆ ಇಲ್ಲಿ ಬಿಸಿಲು ಚಳಿ ಗಾಳಿ ಮಳೆ ಅಧಿಕವಾಗಿದ್ದು, ಇದುವೇ ಮಲೆನಾಡಿನ ವಿಶಿಷ್ಠತೆಗಳಲ್ಲೊಂದು. ಆದರೆ ಇದೇ ಸಂದರ್ಭವನ್ನು ಬಳಸಿಕೊಳ್ಳುತ್ತಿರುವ ಮೆಸ್ಕಾಂನ ಅಧಿಕಾರಿಗಳು ತಾಲ್ಲೂಕಿನಾಧ್ಯಂತ ವಿದ್ಯುತ್ತನ್ನು ಸಮರ್ಪಕವಾಗಿ ಪೂರೈಕೆ ಮಾಡಲು ಸಂಪೂರ್ಣ ವಿಫಲರಾಗಿದ್ದಾರೆ .
ಮಲೆನಾಡಿನಲ್ಲಿ ಪ್ರತಿ ವರ್ಷವೂ ಅತ್ಯಧಿಕವಾಗಿ ಗಾಳಿ ಸಮೇತವಾಗಿ ಮಳೆ ಸುರಿಯುವುದು ಸಹಜವಾದ ನೈಸರ್ಗಿಕ ಗುಣವನ್ನು ಹೊಂದಿದಂತ ಪ್ರದೇಶವಾಗಿದೆ. ಮೂಡಿಗೆರೆಯ ಮಲೆನಾಡು ಪ್ರದೇಶ ಆದರೆ ಇಲ್ಲಿನ ಪಟ್ಟಣ ಹಾಗೂ ಪಟ್ಟಣದ ಸುತ್ತಮುತ್ತದ ಗ್ರಾಮಗಳಿಗೆ ಮಳೆ ಪ್ರಾರಂಭವಾಗುತ್ತಲೇ ಇಲ್ಲಿ ಕರೆಂಟ್ ಇಲ್ಲ ಎಂಬ ಕೂಗು ಸಹಜವಾಗಿ ಕೇಳಿಬರತ್ತದೆ. ವರ್ಷದ 365 ದಿನವೂ ಹಳ್ಳಿಗಳಿಗೆ ಲೋಡ್ ಶೆಡ್ಡಿಂಗ್ ನೆಪವೊಡ್ಡಿ ಪ್ರತಿಧಿನವೂ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಲ್ಲದೇ ದಿನದ 24 ಗಂಟೆಗಳಲ್ಲಿ ಕನಿಷ್ಟ 6 ಗಂಟೆ ನಿರಂತರ ವಿದ್ಯುತ್ ಕೊಡುವುದರಲ್ಲಿ ಇಲ್ಲಿನ ಮೆಸ್ಕಾಂನವರು ಸಂಪೂರ್ಣ ವಿಪಲರಾಗಿದ್ದಾರೆ.
ಮಲೆನಾಡ ಪ್ರದೇಶವಾದ ಇಲ್ಲಿ ಹೆಚ್ಚಿನದಾಗಿ ತೋಟಗಳ ಮದ್ಯದಲ್ಲೇ ವಿದ್ಯುತ್ ತಂತಿ ಹಾದು ಹೋಗಿದ್ದು ಅದರಲ್ಲಿ ಈ ಭಾಗದ ಜನರು ಹೆಚ್ಚಿನದಾಗಿ ತೋಟದ ಕೆಲಸವನ್ನೆ ಅವಲಂಬಿಸಿ ಜೀವಿಸುತ್ತಿದ್ದು ಇದುವೇ ಇಲ್ಲಿಯ ರೈತರ ಹಾಗೂ ಕೂಲಿ ಕಾರ್ಮಿಕರ ಜೀವನದ ಅಡಿಪಾಯವಾಗಿದೆ. ಅದರಲ್ಲಿ ಇಲ್ಲಿ ಹಾದು ಹೋದಂತಹ ವಿದ್ಯುತ್ ಲೈನನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡದೇ ಮಳೆಗಾಲ ಪ್ರಾರಂಭವಾದ ಕೂಡಲೇ ರಸ್ತೆಗೆ ಕಾಣುವಂತಹ ಮರದ ಕೊನೆಗಳನ್ನು ಕಡಿದು ಜಂಗಲ್ ಕಡಿಯಲಾಯಿತು ಎಂದು ಮೇಲಾಧಿಕಾರಿಗಳಿಗೆ ಲೆಕ್ಕಾ ತೋರಿಸಿಕೊಂಡು ಹಣ ಮಾಡುವುದಕ್ಕೆ ಅಧಿಕಾರಿಗಳಿಗೆ ಮಲೆನಾಡಿನ ಮಳೆಗಾಲ ಒಂದು ಉತ್ತಮ ಸಮಯವಾಗಿದೆ. ಕೇವಲ ಮಳೆಗಾಲಕ್ಕೆ ಕಾಯುವ ಇಲ್ಲಿಯ ಮೆಸ್ಕಾಂನ ಅಧಿಕಾರಿಗಳಿಗೆ ಸಮಯ ಪ್ರಜ್ಞೆ ಇಲ್ಲದಂತೆ ಆಗಿದ್ದು, ಇಲ್ಲಿ ಇವರ ನಿರ್ವಹಣೆ ಕೇವಲ ಮಳೆಗಾಲಕ್ಕೆ ಎಚ್ಚೆತ್ತುಕೊಳ್ಳುವ ಅಧಿಕಾರಿಗಳು ಅಪಘಾತದ ದಿನವನ್ನು ಕಾಯುವ ಬದಲು ಅಪಾಘಾತ ತಡೆಯುವ ನಿಟ್ಟಿನಲ್ಲಿ ಕೆಲಸ ಮಾಡಿದರೆ ಇಂತಹ ಘಟನೆಗಳಿಗೆ ನಾಂದಿಯಾಡಬಹುದು.
ಕಳೆದ ದಿನಗಳಲ್ಲಿ ತೀವ್ರ ಬರಗಾಲದ ಹಿನ್ನಲೆಯಲ್ಲಿ ತಾಲ್ಲೂಕಿನಾದ್ಯಂತ ಅದರಲ್ಲಿಯೂ ಪ್ರಮುಖವಾಗಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗಾಗಿ ಆಹಾಕಾರ ಎದ್ದಿದ್ದು ಅದರಲ್ಲಿ ಅಲ್ಪ ಸ್ವಲ್ಪ ಇದ್ದ ನೀರು ಸರಬರಾಜು ಮಾಡಲು ಹೋದರೆ ಅಲ್ಲಿ ವಿದ್ಯತ್ ಸ್ಥಗಿತ ಇಂತಹ ಪರಿಸ್ಥಿತಿಯಲ್ಲಿ ಇನ್ನೇನು ಮಳೆಗಾಲ ಪ್ರಾರಂಭವಾಯಿತಲ್ಲ ನಮಗೆ ಕುಡಿಯಲು ನೀರು ಸಿಗಬಹುದು ಎಂದು ಇಲ್ಲಿಯ ಜನತೆ ಖುಷಿಯಲ್ಲಿರುವಾಗ ಅದನ್ನು ಸಹ ಸರಬರಾಜು ಮಾಡಲು ಇಲ್ಲಿ ನಿರಂತರ ವಿದ್ಯುತ್ ಸಮಸ್ಯೆ ಇಂತಹ ಪರಿಸ್ಥಿಯಲ್ಲಿ ನೀರನ್ನು ಸರಬರಾಜಿಗಾಗಿ ಪಟ್ಟಣದ ಜನತೆ ಪಟ್ಟಣ ಪಂಚಾಯಿತಿಯ ಮೊರೆಯನ್ನು ಪ್ರತಿದಿನವೂ ಹೋಗುತ್ತಿದ್ದು ಅವರಿಗೇ ಯಾವ ರೀತಿ ಉತ್ತರವನ್ನು ಕೊಡಲಿ ಎಂದು ತೋಚದೇ ಇಲ್ಲಿನ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಪಟ್ಟಣದಲ್ಲಿ ನಿರಂತರ ವಿದ್ಯುತ್ ಸಮಸ್ಯೆವಿರುವುದರಿಂದ ನೀರಿನ ಸರಬರಾಜಿನಲ್ಲಿ ವ್ಯತ್ಯಯವಾಗಿರುತ್ತದೆ. ಎಂಬಂತಹ ನಾಮಪಲಕ ರಾರಾಜಿಸುತ್ತಿದ್ದು ಇದೂ ಸಹ ಇಲ್ಲಿನ ಮೆಸ್ಕಾಂ ಅಧಿಕಾರಿಗಳ ಕರ್ತವ್ಯ ನಿರ್ಲಕ್ಷ್ಯದ ಕುರಿತು ಮತ್ತೊಂದು ಉದಾಹರಣೆಯಾಗಿದೆ.
ವಿದ್ಯುತ್ ಸಮಸ್ಯೆಯ ಬಗ್ಗೆ ಫಸ್ಟ್ ಸುದ್ದಿಯೊಂದಿಗೆ ಮಾತನಾಡಿದ ಕಿಸಾನ್ ಕಾಂಗ್ರೆಸ್ ಜಿಲ್ಲಾ ಕಾರ್ಯಾಧ್ಯಕ್ಷ ಬ್ರಿಜೇಶ್ ಕಡಿದಾಳ್ ಅವರು ದಾರದಹಳ್ಳಿ ಆದರ್ಶಗ್ರಾಮವಾಗಿದ್ದು, ದಿನದಲ್ಲಿ ಐದು ಗಂಟೆ ವಿದ್ಯುತ್ ಇದ್ದರೆ ಅದೇ ಹೆಚ್ಚು ಅಧಿಕಾರಿಗಳಿಗೆ ಕೇಳಿದರೆ ಉಡಾಫೆಯ ಉತ್ತರ ನೀಡುತ್ತಿದ್ದು, ಕಿತ್ತಲೆಗಂಡಿ ಬಳಿ ನೂತನ ಸೆಕ್ಷನ್ ಕಚೇರಿ ತೆರೆಯಲಾಗಿದ್ದು, ಅಲ್ಲಿಗೆ ಯಾವಾಗ ಅಧಿಕಾರಿಗಳು ಬರುತ್ತಾರೋ ಹೋಗುತ್ತಾರೋ ಎಂಬುವುದು ತಿಳಿದಿಲ್ಲ. ಜೂನಿಯರ್ ಇಂಜಿನಿಯರ್ ಗೆ ಯಾವಾಗ ಕರೆ ಮಾಡಿದರೂ ಸ್ವಿಚ್ ಆಫ್ ಆಗಿರುತ್ತದೆ. ಲೈನ್‍ಮ್ಯಾನ್‍ಗಳು ಉತ್ತಮ ಸೇವೆ ನೀಡಿದರೂ ಮೇಲಾಧಿಕಾರಿಗಳ ನಿರ್ಲಕ್ಷ ಎದ್ದು ಕಾಣುತ್ತಿದ್ದು, ಈ ಬಗ್ಗೆ ಶಾಸಕರು ಹಾಗೂ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರು ಗಮನ ಹರಿಸಿ ಕ್ರಮ ಕೈಗೊಳ್ಳಬೇಕು ಎಂದರು.
ಈ ಬಗ್ಗೆ ಫಸ್ಟ್ ಸುದ್ದಿಯೊಂದಿಗೆ ಮಾತನಾಡಿದ ಕನ್ನಡ ಪರ ಹಿರಿಯ ಹೋರಾಟಗಾರರಾದ ಹೊರಟ್ಟಿ ರಘುರವರು ಮೂಡಿಗೆರೆ ತಾಲ್ಲೂಕಿನಲ್ಲಿ ವರ್ಷಂಪ್ರತಿ ಭಾರಿ ಗಾಳಿ ಮಳೆಯಾಗುವುದು ಸಹಜ ಆದರೆ ಇಲ್ಲಿನ ಮೆಸ್ಕಾಂನ ಅಧಿಕಾರಿಗಳು ದಿನಕ್ಕೊಂದು ಯಾವುದಾದರು ಕಾರಣ ನೀಡಿ ವಿದ್ಯುತ್ ಸ್ಥಗಿತಗೊಳಿಸುವುದು ನಿರಂತರ ಕಾಯಕವಾಗಿದೆ ಕೇವಲ ತಿಂಗಳ ಬಾಡಿಗೆಯೆಂದೇ ನಿಗದಿತ ದರವನ್ನು ವಸೂಲಿ ಮಾಡುವ ಮೆಸ್ಕಾಂನವರು ವಿದ್ಯುತ್ತನ್ನು ಪಾರದರ್ಶಕವಾದ ರೀತಿಯಲ್ಲಿ ನೀಡುವುದಕ್ಕೆ ವೈಜ್ಞಾನಿಕ ಮಾರ್ಗ ಕಂಡು ಹಿಡಿದು ಅದರ ನಿಟ್ಟಿನಲ್ಲಿ ಮಲೆನಾಡಿನಲ್ಲಿ ನಿರಂತರ ವಿದ್ಯುತ್ ನೀಡಿದಲ್ಲಿ ಇಲ್ಲಿಯ ಜನತೆಗ ಹಾಗೂ ವಿದ್ಯಾರ್ಥಿಗಳಿಗೆ ವಿವಿದ ಹಳ್ಳಿಗಳಿಗೆ ಇದರಿಂದ ಉಪಯುಕ್ತವಾಗಬಹುದು.