ಮಳೆಗೆ ಮನೆ ಗೋಡೆ ಕುಸಿದು ಏಳು ಮಂದಿ ಸಾವು…

72
firstsuddi

ಬೆಳಗಾವಿ : ಮಳೆಗೆ ಮನೆಯ ಗೋಡೆ ಕುಸಿದು ಒಂದೇ ಕುಟುಂಬದ ಆರು ಮಂದಿ ಮತ್ತು ಪಕ್ಕದ ಮನೆಯ ಬಾಲಕಿ ಸೇರಿ ಏಳು ಮಂದಿ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಬಡಾಲ ಅಂಕಲಗಿ ಗ್ರಾಮದಲ್ಲಿ ನಡೆದಿದೆ. ಮೃತರನ್ನ ಗಂಗವ್ವ ಖನಗಾವಿ(50), ಸತ್ಯವಾ ಖನಗಾವಿ(45), ಪೂಜಾ(8), ಸವಿತಾ(28), ಕೇಶವ್(8), ಲಕ್ಷ್ಮೀ(15) ಹಾಗೂ ಅರ್ಜುನ್ ಎಂದು ಗುರುತಿಸಲಾಗಿದೆ.

ಬಡಾಲ ಅಂಕಲಗಿ ಗ್ರಾಮದಲ್ಲಿ ವಾಸವಾಗಿದ್ದ ಕುಟುಂಬವೊಂದು ಮನೆಯ ಛಾವಣಿ ಬಿಚ್ಚಿ ಹೊಸ ಛಾವಣಿ ಹಾಕುವ ಸಿದ್ಧತೆ ನಡೆಸಿತ್ತು. ಹೀಗಾಗಿ ಪಕ್ಕದಲ್ಲಿಯೇ ತಗಡಿನ ಶೆಡ್ ಹಾಕಿ ವಾಸಮಾಡಿತ್ತು. ಆದರೆ, ನಿನ್ನೆ ಭಾರಿ ಮಳೆ ಬೀಳುತ್ತಿದ್ದ ಕಾರಣ ಎಲ್ಲರೂ ಅಲ್ಲೇ ನಿಂತುಕೊಂಡಿದ್ದಾರೆ. ಈ ವೇಳೆ ಮನೆಯ ಗೋಡೆ ದಿಢೀರ್ ಕುಸಿದು ಅವರ ಮೇಲೆ ಬಿದ್ದಿದ್ದು, ಪರಿಣಾಮ ಸಾವನ್ನಪ್ಪಿದ್ದಾರೆಂದು ತಿಳಿದು ಬಂದಿದೆ.

ಮೃತರ ಕುಟುಂಬಕ್ಕೆ ಬೊಮ್ಮಾಯಿ ಐದು ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ದುರಂತ ನಡೆದ ಸ್ಥಳಕ್ಕೆ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಜಿಲ್ಲಾಧಿಕಾರಿ ಎಸ್.ಜಿ.ಹಿರೇಮಠ್ ಭೇಟಿ ನೀಡಿದರು.