ಮಹಾತ್ಮ ಗಾಂಧಿ ಮರಿಮೊಮ್ಮಗಳಿಗೆ ಜೈಲು ಶಿಕ್ಷೆ ವಿಧಿಸಿದ ದಕ್ಷಿಣ ಆಫ್ರಿಕಾ ನ್ಯಾಯಾಲಯ : ಕಾರಣ ಏನು ಗೊತ್ತಾ?

97
firstsuddi

ದಕ್ಷಿಣ ಆಫ್ರಿಕಾ : ಮಹಾತ್ಮ ಗಾಂಧಿ ಮರಿಮೊಮ್ಮಗಳಿಗೆ ದಕ್ಷಿಣ ಆಫ್ರಿಕಾ ಡರ್ಬನ್ ವಿಶೇಷ ವಾಣಿಜ್ಯ ಅಪರಾಧ ನ್ಯಾಯಾಲಯ ಏಳು ವರ್ಷ ಜೈಲು ಶಿಕ್ಷೆ ವಿಧಿಸಿದೆ.

ದಕ್ಷಿಣ ಆಫ್ರಿಕಾ ಮೂಲದ ಉದ್ಯಮಿ ಮಹಾರಾಜ್ ಅವರಿಗೆ 6.2 ಮಿಲಿಯನ್ ರಾಂಡ್ ಅಂದರೆ 3,33,59,586 ರೂ. ಹಣವನ್ನು ವಂಚಿಸಿರುವ ಆರೋಪ ಆಶಿಶ್ ಲತಾ ರಾಮ್ ಗೋಬಿನ್ (56) ಅವರ ಮೇಲಿದ್ದು, ನಿನ್ನೆ ಈ ಬಗ್ಗೆ ತೀರ್ಪು ನೀಡಿರುವ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದೆ.

ದಕ್ಷಿಣ ಆಫ್ರಿಕಾದ ಹಾಸ್ಪಿಟಲ್ ಗ್ರೂಪ್ ನೆಟ್ ಕೇರ್ ಗಾಗಿ ಮೂರು ಕಂಟೇನರ್ ಲೆನಿನ್ ಆಮದು ಮಾಡಿಕೊಂಡಿದ್ದೇನೆ. ಆದರೆ ವಸ್ತುಗಳನ್ನು ಇಳಿಸಿಕೊಳ್ಳಲು ಹಣ ಬೇಕು. ತುರ್ತಾಗಿ 6.2 ಮಿಲಿಯನ್ ರಾಂಡ್ ಬೇಕಿದ್ದು, ನಿಮಗೆ ಸೂಕ್ತ ಸಮಯದೊಂದಿಗೆ ಹಿಂದಿರುಗಿಸುತ್ತೇನೆ ಮಹಾರಾಜ್ ಗೆ ಭರವಸೆ ನೀಡಿ ಹಣವನ್ನು ಪಡೆದಿದ್ದರು. ನೆಟ್ ಕೇರ್ ಬ್ಯಾಂಕ್ ಖಾತೆ ಮೂಲಕ ಈ ಹಣವನ್ನು ಪಾವತಿ ಮಾಡಿರುವುದಾಗಿ ನಕಲಿ ಸಹಿಯುಳ್ಳ ದಾಖಲೆಗಳನ್ನು ತೋರಿಸಿದ್ದರು. ಇದು ನಕಲಿ ದಾಖಲೆಗಳೆಂದು ತಿಳಿದ ಬಳಿಕ ಮಹಾರಾಜ್ ಪ್ರಕರಣ ದಾಖಲಿಸಿದ್ದರು.

ವಿಚಾರಣೆ ವೇಳೆ ಮಹಾತ್ಮ ಗಾಂಧಿ ಅವರ ಮರಿಮೊಮ್ಮಗಳು ತಪಿತಸ್ಥೆ ಎಂದು ಕಂಡುಬಂದ ಕಾರಣ ಇದೀಗ ದಕ್ಷಿಣ ಆಫ್ರಿಕಾ ನ್ಯಾಯಾಲಯ ಏಳು ವರ್ಷ ಜೈಲು ಶಿಕ್ಷೆ ವಿಧಿಸಿದೆ.