ಮಹಿಳಾ ವಿಭಾಗದ ಕ್ರೀಡಾಕೂಟಗಳಲ್ಲಿ ತೃತೀಯ ಲಿಂಗಿಗಳಿಗೆ ನಿಷೇಧ ಆದೇಶಕ್ಕೆ ಟ್ರಂಪ್ ಸಹಿ.

43

ವಾಷಿಂಗ್ಟನ್: ಮಹಿಳಾ ವಿಭಾಗದ ಕ್ರೀಡಾಕೂಟಗಳಲ್ಲಿ ತೃತೀಯ ಲಿಂಗಿಗಳಿಗೆ ನಿಷೇಧ ಹೇರುವ ಆದೇಶಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ್ದಾರೆ. ಮಹಿಳಾ ಕ್ರೀಡೆಗಳಿಂದ ಪುರುಷರನ್ನು ದೂರವಿಡುವುದು ಎಂಬ ಶೀರ್ಷಿಕೆಯ ಮೇಲೆ ಆದೇಶ ಹೊರಡಿಸಲಾಗಿದೆ. ಹುಟ್ಟಿನಿಂದ ಬಂದ ಲಿಂಗತ್ವವನ್ನು ಅಮೆರಿಕ ಸರ್ಕಾರ ಪರಿಗಣಿಸಿದೆ. ಮಹಿಳೆಯರ ವಿಭಾಗದಲ್ಲಿ ತೃತೀಯ ಲಿಂಗಿಗಳು ಭಾಗಿಯಾಗುವುದರ ಬಗ್ಗೆ ಸಾಕಷ್ಟು ಆಕ್ಷೇಪ ಕೇಳಿ ಬರುತ್ತಿತ್ತು. ಕಳೆದ ಒಲಂಪಿಕ್ಸ್ ನಲ್ಲೂ ಕುಸ್ತಿ ವಿಭಾಗದಲ್ಲಿ ಮಹಿಳೆಯರ ಜೊತೆ ತೃತೀಯ ಲಿಂಗಿಗಳು ಭಾಗಿಯಾಗಿದ್ದು ವಿವಾದಕ್ಕೆ ಕಾರಣವಾಗಿತ್ತು. ಇದರಿಂದ ಮಹಿಳಾ ಕ್ರೀಡೆಗಳಲ್ಲಿ ತೃತೀಯಲಿಂಗಿಗಳು ಭಾಗವಹಿಸುವುದರಿಂದ ಅನ್ಯಾಯವಾಗುತ್ತಿದೆ ಎಂದು ಮಹಿಳಾ ಕ್ರೀಡಾಪಟುಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದರು. ಈ ಆದೇಶ ಹುಡುಗಿಯರು ಮತ್ತು ಮಹಿಳೆಯರ ಕ್ರೀಡೆಗಳಲ್ಲಿ ತೃತೀಯಲಿಂಗಿ ಕ್ರೀಡಾಪಟುಗಳು ಸ್ಪರ್ಧಿಸುವುದನ್ನು ನಿಷೇಧಿಸುತ್ತದೆ.