ಮಾಜಿ ಸಚಿವ ಹೆಚ್.ಡಿ.ರೇವಣ್ಣನ ಆಪ್ತ, ಗ್ರ್ಯಾನೈಟ್ ಉದ್ಯಮಿಯ ಬರ್ಬರ ಹತ್ಯೆ…

72
firstsuddi

ಹಾಸನ: ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರ ಆಪ್ತನಾಗಿರುವ ಕೃಷ್ಣೇಗೌಡ (53) ಅವರನ್ನು ಗ್ರಾನೈಟ್ ಫ್ಯಾಕ್ಟರಿ ಎದುರೇ ದುಷ್ಕರ್ಮಿಗಳು ಹಾಡ ಹಗಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ದುರ್ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಮೃತ ಕೃಷ್ಣೇಗೌಡ ಅವರು ಜೆಡಿಎಸ್ ಹಾಗೂ ಹೆಚ್.ಡಿ. ರೇವಣ್ಣ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ಕೃಷ್ಣೇಗೌಡ ಶ್ರೀ ರಾಮ ಎಂಬ ಗ್ರಾನೈಟ್ ಕಂಪನಿಯನ್ನು ಹೊಂದಿದ್ದರು. ಅಲ್ಲದೆ ಗುತ್ತಿಗೆದಾರರೂ ಕೂಡ ಆಗಿದ್ದರು. ಪ್ರತಿ ದಿನ ತಮ್ಮ ಗ್ರಾನೈಟ್ ಗೆ ಭೇಟಿ ನೀಡುತ್ತಿದ್ದ ಕೃಷ್ಣೇಗೌಡ ಇಂದು ಕೂಡ ಗ್ರಾನೈಟ್ ಕಂಪನಿಗೆ ಬರುತ್ತಿದ್ದಾಗ ದುಷ್ಕರ್ಮಿಗಳು ಕಾರಿಗೆ ಅಡ್ಡಗಟ್ಟಿದ್ದಾರೆ. ಈ ವೇಳೆ ಯಾರಿರಬಹುದು ಎಂದು ವಿಚಾರಿಸಲು ಕೃಷ್ಟೇಗೌಡ ಕಾರಿನಿಂದ ಇಳಿದಿದ್ದಾರೆ. ಆಗ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಮನಸೋ ಇಚ್ಛೆ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ತಕ್ಷಣ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳ ಹುಡುಕಾಟಕ್ಕಾಗಿ ನಾಲ್ಕು ತಂಡಗಳನ್ನು ರಚಿಸಲಾಗಿದೆ. ಆದಷ್ಟು ಬೇಗ ಆರೋಪಿಗಳನ್ನು ಪತ್ತೆ ಹಚ್ಚುವುದಾಗಿ ಎಸ್​ಪಿ ಹರಿರಾಮ್ ತಿಳಿಸಿದ್ದಾರೆ.