ಮುಂಬೈನ ಪ್ರತಿಷ್ಠಿತ ರೆಸ್ಟೋರೆಂಟ್​ನ ಖಾದ್ಯದಲ್ಲಿ ಸತ್ತ ಇಲಿ ಪತ್ತೆ- ದೂರು ದಾಖಲಿಸಿದ ಗ್ರಾಹಕ…

58
firstsuddi

ಮುಂಬೈ: ದೇಶದ ವಾಣಿಜ್ಯನಗರಿ ಮುಂಬೈನ ಬಾಂದ್ರಾ ಪ್ರದೇಶದ ಪಾಲಿ ಹಿಲ್‌ನಲ್ಲಿರುವ ಜನಪ್ರಿಯ ರೆಸ್ಟೋರೆಂಟ್​ನಲ್ಲಿ ಗ್ರಾಹಕನೊಬ್ಬ ತನ್ನ ಕುಟುಂಬ ಸಮೇತವಾಗಿ ಪಾರ್ಟಿಗೆ ಹೋದಾಗ ಥಾಲಿ ಮತ್ತು ಚಿಕನ್ ಆರ್ಡರ್ ಮಾಡಲಾಗಿತ್ತು. ಆದರೆ, ಖಾದ್ಯ ಬಡಿಸುವಾಗ ಸಿಬ್ಬಂದಿ ಚಿಕನ್ ಜತೆಗೆ ಸತ್ತ ಇಲಿಯನ್ನೂ ಹಾಕಿದ್ದರು.

ಈ ಕುರಿತು ಗ್ರಾಹಕ ರೆಸ್ಟೋರೆಂಟ್ ವಿರುದ್ಧ ದೂರು ದಾಖಲಿಸಿದ್ದಾನೆ. ದೂರಿನ ಹಿನ್ನಲೆ ಹೋಟೆಲ್ ಮ್ಯಾನೇಜರ್, ಬಾಣಸಿಗ ಮತ್ತು ಸಪ್ಲೇಯರ್ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.

ಪೊಲೀಸರು ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಅಡುಗೆಯವರಾದ ನಾರಾಯಣ ದಾಸ್ ಮತ್ತು ಸಂಜೀವ್ ಕರ್, ರೆಸ್ಟೋರೆಂಟ್ ಮ್ಯಾನೇಜರ್ ವಿವಿಯನ್ ಸಿಕ್ವೇರಾ ಅವರನ್ನು ಬಂಧಿಸಿದ್ದಾರೆ.