ಮುದ್ರಾ ಶಿಶು ಸಾಲ ಯೋಜನೆಯಡಿ 50 ಸಾವಿರ ಸಾಲ ವಿತರಣೆ : ನಿರ್ಮಲಾ ಸೀತಾರಾಮನ್.

178
firstsuddi

ನವದೆಹಲಿ : ಮಹಾಮಾರಿ ಕೊರೊನಾ ವೈರಸ್ ಭೀತಿಯಿಂದ ದೇಶದಲ್ಲಿ ಕುಸಿದಿರುವ ಆರ್ಥಿಕತೆಗೆ ಪುನಃಶ್ಚೇತನ ನೀಡಲು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ್ದ 20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್ ಕುರಿತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು 2ನೇ ಹಂತದಲ್ಲಿ ವಿವರಣೆ ನೀಡುತ್ತಿದ್ದು, ಒಂದು ದೇಶ, ಒಂದು ರೇಷನ್ ಕಾರ್ಡ್ ಯೋಜನೆಯನ್ನು ಜಾರಿಗೊಳಿಸಲಾಗಿದೆ.

• ಕೈಗಾರಿಕೆಗಳು ತಮ್ಮ ಸ್ವಂತ ಜಾಗದಲ್ಲಿ ಬಾಡಿಗೆ ಮನೆಗಳನ್ನು ನಿರ್ಮಿಸಲು ಸರ್ಕಾರದಿಮದ ಸಹಾಯ ಮಾಡಲಾಗುವುದು. ನಗರ ಪ್ರದೇಶ ವಲಸಿಗರು, ಬಡವರು ನಿರ್ದಿಷ್ಠ ಬಾಡಿಗೆಯಲ್ಲಿ ಮನೆ ಬಾಡಿಗೆಗೆ ಪಡೆಯಬಹುದು.

• ಬೀದಿ ಬದಿ ವ್ಯಾಪಾರಿಗಳಿಗೆ ವ್ಯಾಪಾರ ಆರಂಭಿಸಲು 10 ಸಾವಿರ ರೂ. ಮೀಸಲು. 50 ಲಕ್ಷ ಬೀದಿಬದಿ ವ್ಯಾಪಾರಿಗಳಿಗೆ ವಿಶೇಷ ಸಾಲ ಸೌಲಭ್ಯಕ್ಕೆ 5 ಸಾವಿರ ಕೋಟಿ ರೂ. ಬೀದಿ ಬದಿ ವ್ಯಾಪಾರಿಗಳು ಸುಲಭವಾಗಿ ಸಾಲ ನೀಡಲು ಆಧ್ಯತೆ.

• ಮುದ್ರಾ ಶಿಶು ಸಾಲ ಯೋಜನೆಯಲ್ಲಿ 50 ಸಾವಿರದವರೆಗೆ ಸಾಲ ಪಡೆದವರ ಶೇ. 2ರಷ್ಟು ಬಡ್ಡಿ ಕೇಂದ್ರ ಸರ್ಕಾರದಿಂದಲೇ ಭರಿಸುತ್ತದೆ.

• ವಲಸೆ ಕಾರ್ಮಿಕರಿಗೆ ಉಚಿತವಾಗಿ ದಿನಸಿ ನೀಡಲು ಸರ್ಕಾರ ನಿರ್ಧರಿಸಿದ್ದು, ರೇಷನ್ ಕಾರ್ಡ್ ಇಲ್ಲದವರಿಗೂ ಪ್ರತಿ ವ್ಯಕ್ತಿಗೆ 5 ಕೆಜಿ ಅಕ್ಕಿ/ಗೋಧಿ, 1 ಕೆಜಿ ಬೇಳೆಕಾಳುಗಳನ್ನು ವಿತರಣೆ. ರಾಜ್ಯ ಸರ್ಕಾರಗಳು ಮೊದಲು ವಲಸೆ ಕಾರ್ಮಿಕರುಗಳಿಗೆ ಪಡಿತರ ನೀಡಲು ಆಧ್ಯತೆ ನೀಡಬೇಕು. ರಾಜ್ಯ ಸರ್ಕಾರ ಮಾಡುವ ಖರ್ಚುಗಳನ್ನು ಕೇಂದ್ರ ಸರ್ಕಾರವೇ ಭರಿಸಲಿದೆ. ಪಡಿತರ ವಿತರಣೆ ಮಾಡಲು ಕೇಂದ್ರ ಸರ್ಕಾರದಿಂದ 3,500 ಕೋಟಿ ರೂ ನೀಡಲಾಗುತ್ತದೆ. ಪಡಿತರ ವಿತರಣೆಗೆ ತಂತ್ರಜ್ಞಾನ ಆಧರಿತ ವ್ಯವಸ್ಥೆ ನೆರವಾಗಲಿದೆ. ದೇಶದ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಚೀಟಿಯನ್ನು ಬಳಸಬಹುದು. ಇದರಿಂದ 67 ಕೋಟಿ ಜನರಿಗೆ ಅನುಕೂಲವಾಗಲಿದ್ದು, ಮಾರ್ಚ್ 31, 2021ರ ಒಳಗೆ ಒಂದೇ ದೇಶ ಒಂದೇ ರೇಷನ್ ಕಾರ್ಡ್ ಯೋಜನೆಯನ್ನು ಡಿಜಿಟಲೀಕರಣಗೊಳಿಸಲಾಗುವುದು.