ಮುಸ್ಲಿಮರ ಸಂಖ್ಯೆ 80 ಕೋಟಿ ಆಗಿ ನಮ್ಮ ಜನಸಂಖ್ಯೆ 20 ಕೋಟಿಯಾಗುವಾಗ ನಮ್ಮ ದೇಶದಲ್ಲಿರುವ ಹಿಂದೂಗಳ ಪರಿಸ್ಥಿತಿ ಏನಾಗಬಹುದು ಯೋಚ್ನೆ ಮಾಡಿ: ಹರೀಶ್ ಪೂಂಜಾ ಭಾಷಣ ವೈರಲ್

47
firstsuddi

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಪ್ರಚೋದನಾಕಾರಿ ಭಾಷಣದ ಕ್ಲಿಪ್ ಒಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಜ.7 ರಂದು ಪೆರಾಡಿಯಲ್ಲಿ ನಡೆದ ಅಯ್ಯಪ್ಪ ದೀಪೋತ್ಸವದಲ್ಲಿ ತುಳುವಿನಲ್ಲಿ ಭಾಷಣ ಮಾಡಿದ ಶಾಸಕರು, ಇವತ್ತು ಒಂದು ಮಕ್ಕಳು ಎರಡು ಮಕ್ಕಳು. ಅದುವೇ ಬೇರೆ ಧರ್ಮದವರು ಮಕ್ಕಳು ಎಷ್ಟು ಅಂತ ನೋಡಿದ್ರೆ ನಮ್ಮ ಸಂಖ್ಯೆ ಎಷ್ಟು ಇದೆ. ಕೆಲವರು ಹೇಳ್ತಾರೆ ನಮ್ಮ ಸಂಖ್ಯೆ 80 ಕೋಟಿ ಇದೆ ಅವರದ್ದು 20 ಕೋಟಿ ಇರೋದಲ್ವಾ ಅಂತಾ. ಈ 20 ಕೋಟಿಗೆ ನಾಲ್ಕು ಮಕ್ಕಳು ಹುಟ್ಟಿದ್ರೆ ಎಷ್ಟಾಗುತ್ತದೆ ಎಂಬುದನ್ನು ಲೆಕ್ಕ ಹಾಕಿ ಎಂದರು.

ನಮಗೆ ಹುಟ್ಟೋದು ಒಂದು…ತಪ್ಪಿದ್ರೆ ಎರಡು…ನಮ್ಮದು ಎಷ್ಟಾಗುತ್ತೆ ಲೆಕ್ಕ ಹಾಕಿ. ಒಂದು ಸ್ವಲ್ಪ ಹೊತ್ತು ಮನೆಯಲ್ಲಿ ಕೂತು ಯೋಚನೆ ಮಾಡಿ. ಎಷ್ಟು ವರ್ಷಕ್ಕೆ ನಮ್ಮ ಜನಸಂಖ್ಯೆ ಕಡಿಮೆಯಾಗಬಹುದು, ಎಷ್ಟು ವರ್ಷಕ್ಕೆ ಮುಸ್ಲಿಮರ ಸಂಖ್ಯೆ ಜಾಸ್ತಿಯಾಗಬಹುದು. ಒಂದು ವೇಳೆ ಮುಸ್ಲಿಮರ ಸಂಖ್ಯೆ 80 ಕೋಟಿ ಆಗಿ ನಮ್ಮ ಜನಸಂಖ್ಯೆ 20 ಕೋಟಿಯಾಗುವಾಗ ನಮ್ಮ ದೇಶದಲ್ಲಿರುವ ಹಿಂದೂಗಳ ಪರಿಸ್ಥಿತಿ ಏನಾಗಬಹುದು ಅನ್ನೋದನ್ನ ನಾವು ಯೋಚನೆ ಮಾಡಬೇಕು ಎಂದು ಹೇಳಿದ್ದಾರೆ.

ಸದ್ಯ ಶಾಸಕರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ಪೂಂಜಾ ಪರ- ವಿರೋಧ ಕಾಮೆಂಟ್‍ಗಳು ಬರುತ್ತಿವೆ.