ಮೂಡಿಗೆರೆ : ಎರಡು ವಾರಗಳಿಂದ ಕೇರಳ ಮೂಲದ ವ್ಯಕ್ತಿಯೋರ್ವ ಅನಾಥವಾಗಿ ರಸ್ತೆ ಬದಿಯಲ್ಲಿ ಬಿದ್ದಿದ್ದು ಸೂಕ್ತ ಚಿಕಿತ್ಸೆ ಸಿಗದೆ ತೀವ್ರವಾಗಿ ಬಳಲಿದ್ದ ವ್ಯಕ್ತಿಯೋರ್ವನನ್ನು ಸಮಾಜ ಸೇವಕರೊಬ್ಬರು ಸೂಕ್ತ ಚಿಕಿತ್ಸೆ ನೀಡಿ ಊರಿಗೆ ಕಳುಹಿಸಿಕೊಟ್ಟ ಪ್ರಕರಣ ನಡೆದಿದೆ.
ಯಾವುದೋ ಖಾಯಿಲೆಯಿಂದ ಬಳಲುತ್ತಿದ್ದ ಅನಾಥ ವ್ಯಕ್ತಿ, ಮೈ ಮೇಲೆ ಬಟ್ಟೆ ಹಾಕದೆ ಸೂಕ್ತ ನಿರ್ವಹಣೆ ಮಾಡಿಕೊಳ್ಳಲೂ ಸಾಧ್ಯವಾಗದೆ ತೀವ್ರ ಬಳಲಿಕೆಯಿಂದ ರಸ್ತೆ ಬದಿಯಲ್ಲಿ ಬಿದ್ದು ನರಳುತ್ತಿದ್ದರು. ಮೈ ಮೇಲಿನ ಕೊಳಕಿನಿಂದಾಗಿ ಹೊಟ್ಟೆಯ ಭಾಗದ ಚರ್ಮ ಕೊಳೆತು ನಾರಲು ಪ್ರಾರಂಭವಾಗಿ ಹುಳುಗಳು ಕಾಣಿಸಿಕೊಳ್ಳತೊಡಗಿದ್ದವು. ರಸ್ತೆ ಬದಿಯಲ್ಲಿಯೇ ಬಿದ್ದಿದ್ದ ವ್ಯಕ್ತಿಯ ಬಳಿ ಕೆಟ್ಟ ವಾಸನೆ ಬರುತ್ತಿದ್ದರಿಂದ ಸಮೀಪದಲ್ಲಿ ಹಾದುಹೋಗುತ್ತಿದ್ದ ದಾರಿಹೋಕರು ಮೂಗು ಮುಚ್ಚಿಕೊಂಡು ಬಯ್ಯುತ್ತಾ ಸಾಗುತ್ತಿದ್ದರು. ಈ ವಿಷಯ ತಿಳಿದ ಕೂಡಲೇ ಬಣಕಲ್ ಗ್ರಾಮದ ಆರೀಫ್ ಎಂಬುವವರು ಆತನಿಗೆ ಸೂಕ್ತ ಚಿಕಿತ್ಸೆ ನೀಡಿ, ಊಟ ನೀಡಿ, ಸ್ನಾನ ಮಾಡಿಸಿ, ಹೊಸ ಬಟ್ಟೆ ತೊಡಿಸಿ ಆತನ ಬಗ್ಗೆ ವಿಚಾರಣೆ ನಡೆಸಿದ್ದಾರೆ. ನಂತರ ಸ್ಥಳೀಯರ ಸಹಕಾರದೊಂದಿಗೆ ಆತನ್ನು ಆತನ ಊರಿನ ಬಗ್ಗೆ ತಿಳಿದುಕೊಂಡು ಊರಿಗೆ ಕಳುಹಿಸಿಕೊಟ್ಟಿದ್ದಾರೆ. ಆರೀಫ್ ಅವರ ಈ ಮಾನವೀಯತೆಗೆ ಸಾರ್ವಜನಿಕರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.
Home ಸ್ಥಳಿಯ ಸುದ್ದಿ ಮೂಡಿಗೆರೆ : ಅನಾಥವಾಗಿ ರಸ್ತೆ ಬದಿಯಲ್ಲಿ ಬಿದ್ದಿದ್ದ ವ್ಯಕ್ತಿಗೆ ಚಿಕಿತ್ಸೆ ನೀಡಿ ಸಲಹಿದ ಸಮಾಜ ಸೇವಕ...










