ಮೂಡಿಗೆರೆ: ಇಂದು ಉಪಮುಖ್ಯ ಮಂತ್ರಿ ಅಶ್ವಥ್ ನಾರಯಣ್ ಅವರು ಭೇಟಿ…

313
firstsuddi

ಚಿಕ್ಕಮಗಳೂರು : ರಾಜ್ಯದ ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆ, ವಿದ್ಯುನ್ಮಾನ, ಐ.ಟಿ ಮತ್ತು ಬಿ.ಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವರಾದ ಡಾ.ಅಶ್ವಥ್ ನಾರಾಯಣ ಸಿ.ಎನ್ ಅವರು ಜನವರಿ 01 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಜನವರಿ 01 ರಂದು ಬೆಳಿಗ್ಗೆ 11.30ಕ್ಕೆ ಜನ್ನಾಪುರಕ್ಕೆ ಆಗಮಿಸಿ 11.45ಕ್ಕೆ ಜನ್ನಾಪುರದಿಂದ ಮೂಡಿಗೆರೆ ತಾಲ್ಲೂಕಿನ ವೇಣುಗೋಪಾಲ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 12.30ಕ್ಕೆ ವೇಣುಗೋಪಾಲ ದೇವಸ್ಥಾನದಿಂದ ಕೊಟ್ಟಿಗೆಹಾರ ರಸ್ತೆಯ ಮೂಲಕ ಗುತ್ತಿ ಗ್ರಾಮಕ್ಕೆ ಭೇಟಿ ಮಧ್ಯಾಹ್ನ 1.00 ಗಂಟೆಗೆ ಗುತ್ತಿಯಿಂದ ದೇವರ ಮನೆಗೆ ಭೇಟಿ. ನಂತರ 1.20ಕ್ಕೆ ಕಾಲಭೈರವೇಶ್ವರ ದೇವಸ್ಥಾನ, ಮಧ್ಯಾಹ್ನ 1.50ಕ್ಕೆ ಕಾಲಭೈರವೇಶ್ವರ ದೇವಸ್ಥಾನದಿಂದ ಕೊಡದ ಹಡ್ಲುಗೆ ಭೇಟಿ ಮಧ್ಯಾಹ್ನ 3.30ಕ್ಕೆ ಕೊಡದ ಹಡ್ಲುನಿಂದ ಕೋಗಿಲೆಗೆ ಪ್ರಯಾಣ. ಸಂಜೆ 4.00 ಗಂಟೆಗೆ ಕೋಗಿಲೆಯಿಂದ ರಸ್ತೆ ಮೂಲಕ ಬಣಕಲ್ ಭೇಟಿ, ಸಂಜೆ 4.15ಕ್ಕೆ ಬಣಕಲ್‍ನಿಂದ ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿಗೆ ಪ್ರಯಾಣ ಬೆಳಸಲಿದ್ದಾರೆ ಎಂದು ಉಪಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.