ಕೊಟ್ಟಿಗೆಹಾರ : ಬಾಳೂರು ಹೋಬಳಿಯ ಮರ್ಕಲ್ ಗ್ರಾಮದಲ್ಲಿ ನಾಯಿಗಳ ಬೊಗಳುವಿಕೆಯ ಶಬ್ದಕ್ಕೆ ಜಿಂಕೆಯೊಂದು ಗಾಬರಿಗೊಂಡು ಕಂದಕಕ್ಕೆ ಉರುಳಿ ಹೃದಯಘಾತದಿಂದ ಮೃತಪಟ್ಟಿರುವ ಘಟನೆ ಇಂದು ನಡೆದಿದೆ.
ನಿಡುವಾಳೆ ಗ್ರಾಮ ಪಂಚಾಯಿತಿಯ ಮರ್ಕಲ್ ಗ್ರಾಮದಲ್ಲಿ ಇಂದು ನಸುಕಿನಲ್ಲಿ ಜಿಂಕೆಯೊಂದು ಕಾಡಿನಿಂದ ಜೇವಿಎಸ್ ಎಸ್ಟೇಟ್ ಕಡೆಗೆ ಬಂದಿದ್ದು ಅದನ್ನು ಕಂಡ ನಾಯಿಗಳು ಜಿಂಕೆಯನ್ನು ನೋಡಿ ಬೊಗಳಿದಾಗ ಜಿಂಕೆಯು ನಾಯಿಯಿಂದ ತಪ್ಪಿಸಿಕೊಳ್ಳಲು ಓಡಿ ಹೋಗಿ ಧರೆಯ ಕೆಳಗೆ ಜಾರಿ ಕಂದಕಕ್ಕೆ ಬಿದ್ದು ಹೃದಯಘಾತದಿಂದ ಸಾವನ್ನಪ್ಪಿದೆ ಎಂದು ನಿಡುವಾಳೆಯ ಅರಣ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸ್ಥಳಕ್ಕೆ ಉಪ ವಲಯ ಅರಣ್ಯ ಅಧಿಕಾರಿ ರಂಜಿತ್, ಅರಣ್ಯ ರಕ್ಷಕ ಯೂಸುಫ್ ಬೇಟಿ ನೀಡಿ ಮಹಜರು ನಡೆಸಿದ್ದಾರೆ.










