ಮೂಡಿಗೆರೆ : ಕಳೆದ ರಾತ್ರಿಯಿಂದ ಎಡಬಿಡದೆ ಧಾರಾಕಾರ ಮಳೆಯಾಗುತ್ತಿದ್ದು, ಪಶ್ಚಿಮ ಘಟ್ಟ ಸಾಲಿನಲ್ಲಿ ಬಿಟ್ಟು ಬಿಟ್ಟು ಮಳೆ ಸುರಿಯುತ್ತಿದ್ದು, ತಾಲ್ಲೂಕಿನ ಚಾರ್ಮಾಡಿ ಗಾಟ್, ಕೊಟ್ಟಿಗೆಹಾರ, ಬೈರಾಪುರ, ದಾರದಹಳ್ಳಿ ಸುತ್ತಾ ಮುತ್ತಾ ಬಾರಿ ಮಳೆಯಾಗುತ್ತಿದ್ದು, ಕಳಸ, ಕುದ್ರೆಮುಖ, ಕೆರೆಕಟ್ಟೆ ಭಾಗಗಳಲ್ಲಿ ಬಿಟ್ಟು ಬಿಟ್ಟು ಮಳೆ ಸುರಿಯುತ್ತಿದ್ದು, ಬಾರಿ ಮಳೆಯಿಂದ ಹೇಮಾವತಿ ನದಿ ಹರಿವಿನಲ್ಲಿ ಹೆಚ್ಚಳವಾಗಿದ್ದು, ಮುಂದಿನ ಮೂರು ದಿನಗಳು ಬಾರಿ ಗಾಳಿ ಮಳೆ ಆಗುವ ಮುನ್ಸೂಚನೆ ಹವಾಮಾನ ಇಲಾಖೆ ನೀಡಿದೆ.