ಮೂಡಿಗೆರೆ : ಕುಸಿಯುವ ಭೀತಿಯಲ್ಲಿ ಕೊಟ್ಟಿಗೆಹಾರ ಹೊರನಾಡು ರಸ್ತೆ…

138
firstsuddi

ಕೊಟ್ಟಿಗೆಹಾರ: ಕೊಟ್ಟಿಗೆಹಾರದಿಂದ ಹೊರನಾಡಿಗೆ ಸಾಗುವ ರಸ್ತೆಯ ಅಜ್ಜಿಕೊಡಿಗೆ ಸಮೀಪ ರಸ್ತೆ ಕುಸಿಯತೊಡಗಿದ್ದು ಸಂಪರ್ಕ ಕಡಿತದ ಬೀತಿ ಎದುರಾಗಿದೆ.
ರಸ್ತೆಯ ಮದ್ಯಭಾಗದಲ್ಲಿ ಕುಸಿದಿರುವುದರಿಂದ ಕುಸಿದ ಭಾಗಕ್ಕೆ ಕಲ್ಲುಗಳನ್ನು ಇಡಲಾಗಿದ್ದು ಈ ಮಾರ್ಗವಾಗಿ ಸಂಚರಿಸುವ ವಾಹನಗಳು ಕುಸಿದ ರಸ್ತೆಯ ಭಾಗವನ್ನು ಬಳಸಿಕೊಂಡು ಸಂಚರಿಸವಂತಾಗಿದೆ. ದಿನದಿಂದದಿನಕ್ಕೆ ರಸ್ತೆ ಕುಸಿತದ ಪ್ರಮಾಣ ಹೆಚ್ಚಾಗುತ್ತಿದ್ದು ಸಂಬಂದಪಟ್ಟ ಅಧಿಕಾರಿಗಳು ರಸ್ತೆ ದುರಸ್ಥಿಗೆ ಮುಂದಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.