ಮೂಡಿಗೆರೆ : ಕೊಟ್ಟಿಗೆಹಾರ ತಲುಪಿದ ಜೈನಸಾಧ್ವಿಗಳ ಯಾತ್ರೆ…

191
firstsuddi

ಕೊಟ್ಟಿಗೆಹಾರ: ಅಹಿಂಸಾ ಮತ್ತು ನಶೆ ಮುಕ್ತ ಧ್ಯೇಯೋದ್ದೇಶದಿಂದ ಆರಂಭಿಸಿದ ಜೈನಸಾದ್ವಿಗಳ ಯಾತ್ರೆ ನಿನ್ನೆ ಸಂಜೆ ಕೊಟ್ಟಿಗೆಹಾರ ತಲುಪಿತು.
ಮಹಾಮುನಿಗಳಾದ ಆಚಾರ್ಯ ಮಹಾಶ್ರಮಣ್ ಜೀ ಅವರ ಶಿಷ್ಯರು ಹಾಗೂ ಜೈನ ಸಾಧ್ವಿಗಳಾದ ಪ್ರಮೀಳಾ ಕುಮಾರಿಜೀ, ಆಸ್ತಾ ಶ್ರೀಜೀ, ಧೈರ್ಯ ಪ್ರಭಾಜೀ, ವಿಜ್ಞಾ ಪ್ರಭಾಜೀ ಅವರ ಯಾತ್ರೆ ನಿನ್ನೆ ಕೊಟ್ಟಿಗೆಹಾರ ತಲುಪಿತು.
ನಿನ್ನೆ ಕೊಟ್ಟಿಗೆಹಾರದಲ್ಲಿ ವಾಸ್ತವ್ಯ ಹೂಡಿದ ಜೈನ ಸಾಧ್ವಿಗಳು ಇಂದು ಬೆಳಿಗ್ಗೆ ಧರ್ಮಸ್ಥಳ ಮೂಡಬಿದರೆ ಕಡೆಗೆ ಸಾಗಿದರು.
ಈ ಸಂದರ್ಭದಲ್ಲಿ ಮೂಡಿಗೆರೆ ಹಾಗೂ ಚಿಕ್ಕಮಗಳೂರಿನ ಜೈನ ಸಮುದಾಯದ ಮುಖಂಡರಾದ ಗೌತಮ್ ಜೈನ್, ಸಂಜಯ್ ಜೈನ್, ಹೇಮರಾಜ್ ಜೈನ್, ಮಾಣಿಕ್ ಚಂದ್ ಜೈನ್, ಮುಕೇಶ್ ಜೈನ್ ಮುಂತಾದವರು ಇದ್ದರು.