ಕೊಟ್ಟಿಗೆಹಾರ : ಚಾರ್ಮಾಡಿ ಘಾಟ್ ಹೆದ್ದಾರಿಯಲ್ಲಿ ಕಾಡಾನೆಗಳು ಕಾಣಿಸಿಕೊಳ್ಳುವುದು ಹೆಚ್ಚಾಗಿರುವ ಹಿನ್ನಲೆಯಲ್ಲಿ ಅರಣ್ಯ ಇಲಾಖೆಯ ವತಿಯಿಂದ ಹೆದ್ದಾರಿ ಬದಿಯಲ್ಲಿ ಸೂಚನಾಫಲಕವನ್ನು ಅಳವಡಿಸಲಾಯಿತು.
ಕಳೆದ ಕೆಲ ತಿಂಗಳಿಂದ ಚಾರ್ಮಾಡಿ ಘಾಟ್ನ ಹೆದ್ದಾರಿ ತಿರುವಿನಲ್ಲಿ ಕಾಡಾನೆಗಳು ಕಾಣಿಸಿಕೊಂಡು ವಾಹನ ಸವಾರರು ಗಾಬರಿಗೊಂಡ ಘಟನೆ ನಡೆದಿತ್ತು. ಕೆಲದಿನದ ಹಿಂದೆ ಚಾರ್ಮಾಡಿ ಘಾಟ್ನ ಬಿದಿರುತಳದಲ್ಲಿ ವಾಹನ ಸವಾರರನ್ನು ಕಾಡಾನೆ ಅಟ್ಟಿಸಿಕೊಂಡು ಬಂದಿತ್ತು. ಮೀಸಲು ಅರಣ್ಯ ನಡುವೆ ಹೆದ್ದಾರಿ ಹಾದು ಹೋಗಿರುವ ಹಿನ್ನಲೆಯಲ್ಲಿ ಕಾಡಾನೆಗಳು ಹೆದ್ದಾರಿಗೆ ಬರುವುದು ಹೆಚ್ಚಾಗಿರುವ ಕಾರಣ ಅರಣ್ಯ ಇಲಾಖೆ ಚಾರ್ಮಾಡಿ ಘಾಟ್ ಹೆದ್ದಾರಿ ಬದಿಯಲ್ಲಿ ಕಾಡಾನೆಗಳು ರಸ್ತೆ ದಾಟುತ್ತಿರುತ್ತವೆ. ಎಚ್ಚರಿಕೆ, ನಿಧಾನವಾಗಿ ಚಲಿಸಿ ಎಂದು ಬರೆದಿರುವ ಸೂಚನಾಫಲಕ ಅಳವಡಿಸಿದೆ.










