ಮೂಡಿಗೆರೆ: ಡಿʼಗ್ರೂಪ್ ನೌಕರರಿಂದ ಎಂ.ಜಿ.ಎಂ, ಆಸ್ಪತ್ರೆ ಮುಂದೆ ದಿಢೀರ್ ಪ್ರತಿಭಟನೆ…

482
firstsuddi

ಸಕಾಲದಲ್ಲಿ ಸಂಬಳ ಕೊಡಿ ನಮ್ಮನ್ನು ನಿಮ್ಮಂತೆ ಬದುಕಲು ಬಿಡಿ
ಮೂಡಿಗೆರೆ: ಪಟ್ಟಣದ ಎಂ.ಜಿ.ಎಂ ಸಾರ್ವಜನಿಕ ಆಸ್ಪತ್ರೆಯಲ್ಲಿ ಸದಾ ಕಾರ್ಯಪ್ರವೃತರಾಗಿದ್ದ ಡಿʼ ಗ್ರೂಪ್ ನೌಕರರು ತಮಗೆ ಸುಮಾರು ಐದು ತಿಂಗಳಿನಿಂದ ಸಂಬಳವಾಗಿಲ್ಲ ಇದರಿಂದ ನಮ್ಮ ಜೀವನ ನಡೆಸಲು ತುಂಬಾ ಕಷ್ಟವಾಗಿದೆ ಎಂದು ಇಂದು ಬೆಳಗ್ಗೆ ತನ್ನ ಕೆಲಸವನ್ನೆಲ್ಲಾ ಸ್ಥಗಿತಗೊಳಿಸಿ ಆಸ್ಪತ್ರೆಯ ಮುಂದೆ ದಿಢೀರ್ ಪ್ರತಿಭಟನೆ ನಡೆಸಿದರು.
ನಾವು ಇಲ್ಲಿ ಸಮಯಕ್ಕೆ ಸರಿಯಾಗಿ ಎಲ್ಲರೊಂದಿಗೂ ಸೌಮ್ಯದಿಂದ ವರ್ತಿಸಿ ತನ್ನ ಕೆಲಸವನ್ನು ತುಂಬಾ ಜವಾಬ್ದಾರಿಯಿಂದ ನಿರ್ವಹಿಸುತ್ತಾ ಬಂದಿದ್ದು ಹಾಗೂ ನಮಗೆ ಇಲ್ಲಿನ ಎಲ್ಲಾ ಸಿಬ್ಬಂದಿಗಳಿಗೋಲಿಸಿದರೆ ನಮ್ಮ ಕೆಲಸವು ಅತಿಯಾದರು ಅದಕ್ಕೆ ಪಡೆಯುವ ಸಂಬಳ ಮಾತ್ರ ಮಾಸಿಕ 10 ಸಾವಿರದ ಹಾಸು ಪಾಸು ಆದರೆ ಇದು ಸಹ ಕೆಲವು ತಿಂಗಳ ಹಿಂದಿನಿಂದಲೂ ನಮಗೆ ನೀಡುವ ಮಾಸಿಕ ಸಂಬಳ ನೀಡಿರುವುದಿಲ್ಲ. ಇದನ್ನೇ ನಂಬಿಕೊಂಡು ಜೀವನ ನಡೆಸುವ ನಮಗೆ ನಮ್ಮ ದಿನನಿತ್ಯದ ಜೀವನ ಮಾಡಲು ತುಂಬಾ ಕಷ್ಟಕರವಾಗಿದೆ ಎಂದು ಪ್ರತಿಭಟನಾ ನಿರತ ಡಿʼಗ್ರೂಪ್ ನೌಕರರ ಅಳಲಾಗಿದೆ.
ನಮ್ಮನ್ನು ಇಲ್ಲಿನ ಎಲ್ಲಾ ಸಿಬ್ಬಂದಿಗಳಿಂದಲೂ ಹಾಗೂ ನಮಗೆ ನೀಡುವ ಎಲ್ಲಾ ವ್ಯವಸ್ಥೆಯು ಸಮರ್ಪಕವಾಗಿ ಸಿಗುತ್ತಿದೆ. ಆದರೆ ಜೀವನಕ್ಕೆ ಕೇವಲ ತಿಂಗಳ ಸಂಬಳವನ್ನು ಅವಲಂಭಿಸಿರುವ ನಮಗೆ ಪ್ರತಿ ತಿಂಗಳು ನಾವು ಕೆಲಸ ಮಾಡಿದ ಸಂಬಳವನ್ನು ನೀಡಿದಲ್ಲಿ ಅದರಿಂದ ಉಪಯಕ್ತವಾಗುತ್ತದೆ. ಅದನ್ನು ಬಿಟ್ಟು ಇದರ ಗುತ್ತಿಗೆದಾರರು ಅಥವಾ ಏಜೆನ್ಸಿ ಎನಿಸಿಕೊಂಡವರು ಎರಡು ತಿಂಗಳಿಗೊಂದು ಬಾರಿ ಮೂರು ತಿಂಗಳಿಗೊಂದು ಬಾರಿ ಸಂಬಳ ನೀಡುತ್ತಿದ್ದು ಇದರ ಬಗ್ಗೆ ಇಲ್ಲಿನ ಆಡಳಿತದ ಗಮನಕ್ಕೆ ತಂದು ಮಾಹಿತಿ ಕೇಳಿದಾಗ ನಮಗೆ ಸರ್ಕಾರ ಹಣವನ್ನು ನೀಡಿರುವುದಿಲ್ಲ ನಮಗೆ ಸರ್ಕಾರ ಯಾವಾಗ ನೀಡುತ್ತದೆ ತದ ನಂತರ ನಿಮ್ಮ ಸಂಬಳ ಕೊಡುತ್ತೇವೆ ನಾನು ಇಂಚಾರ್ಜ್ ಆಡಳಿತಾಧಿಕಾರಿ ನನ್ನ ಬಳಿ ಏನು ಇಲ್ಲ ಎಂದು ಆಡಳಿತಾಧಿಕಾರಿ ಡಾ||ಅಶ್ವತ್ ಬಾಬು ಸಬೂಬು ನೀಡುತ್ತಾ ಬಂದಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಶಾಸಕರು ಮಧ್ಯೆಪ್ರವೇಶಿಸಿ ನಮ್ಮ ಸಮಸ್ಯೆಯನ್ನು ಬಗೆಹರಿಸಬೇಕೆಂದರು.
ಪ್ರತಿಭಟನಾ ನಿರತ ಡಿʼಗ್ರೂಪ್ ನೌಕರರ ಬೇಡಿಕೆಯಂತೆ ಸ್ಥಳಕ್ಕಾಗಮಿಸಿದ ಶಾಸಕರಾದ ಎಂ.ಪಿ.ಕುಮಾರಸ್ವಾಮಿ ತಕ್ಷಣವೇ ಫೋನಿನ ಮುಖಾಂತರ ಸಂಬಂದಿಸಿದ ಏಜೆನ್ಸಿಯಾದ ʼಇಂಡಿಯನ್ ಬ್ಯೂರೋ, ಬೆಂಗಳೂರು ಎಂಬ ಗುತ್ತಿಗೆ ಸಂಸ್ಥೆಯೊಂದಿಗೆ ಮಾತನಾಡಿ ಇಲ್ಲಿನ ನೌಕರರು ಕಷ್ಟದಲ್ಲಿದ್ದಾರೆ ತಾವುಗಳು ಆದಷ್ಟು ಬೇಗ ಇವರ ಸಮಸ್ಯೆಯನ್ನು ಪರಿಗಣಿಸಬೇಕು ಎಂದು ಫೋನಿನ ಮುಖಾಂತರ ಅವರೊಂದಿಗೆ ಮಾತನಾಡಿದಾಗ ಅದಕ್ಕೆ ಸ್ಪಂದಿಸಿದ ಗುತ್ತಿಗೆ ಸಂಸ್ಥೆಯು ಮುಂದಿನ ತಿಂಗಳ ಮೊದಲ ವಾರದಲ್ಲಿ ಎಲ್ಲರಿಗೂ ಸಂಬಳ ನೀಡುವ ಕುರಿತು ಶಾಸಕರೊಂದಿಗೆ ತಿಳಿಸಿದರು ಹಾಗೆಯೆ ಈ ಕುರಿತು ಸಿಬ್ಬಂದಿಗಳೊಂದಿಗೆ ಮಾತನಾಡಿದ ಶಾಸಕರು ಇದರ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸುವ ಭರವಸೆಯನ್ನು ನೀಡಿದ ಮೇರೆಗೆ ಪ್ರತಿಭಟನಾಕಾರ ಸಿಬ್ಬಂದಿಯು ಪ್ರತಿಭಟನೆಯನ್ನು ಮೊಟಕುಗೊಳಿಸಿದರು. ಸ್ಥಳದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿಗಳಾದಂತಹ ಡಾ||ಸುಂದ್ರೇಶ್, ಬಿಜೆಪಿ ಯುವ ಮುಖಂಡರಾದ ಹುಲ್ಲೇಮನೆ ಚಂದ್ರು, ಸಂದರ್ಶ್ ಹ್ಯಾರಗುಡ್ಡೆ ಹಾಗೂ ಆಸ್ಪತ್ರೆ ಸಿಬ್ಬಂದಿಗಳು ಇದ್ದರು.

firstsuddi