ಮೂಡಿಗೆರೆ : ದಾರದಹಳ್ಳಿ ಸರ್ಕಾರಿ ಪ್ರೌಡ ಶಾಲೆಗೆ ಶೇ 91.66 ಫಲಿತಾಂಶ…

228
firstsuddi

ಮೂಡಿಗೆರೆ : ರಾಜ್ಯಾದ್ಯಂತ ಎಸ್ ಎಸ್ ಎಲ್ ಸಿ ಫಲಿತಾಂಶ ಹೊರಬಿದ್ದಿದ್ದು, ತಾಲೂಕಿನ ದಾರದಹಳ್ಳಿ ಸರ್ಕಾರಿ ಪ್ರೌಡಶಾಲೆ ಶೆ.91.66 ಫಲಿತಾಂಶವನ್ನು ಪಡೆದಿದೆ.

2021- 22 ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಒಟ್ಟು 12 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 11 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅತ್ಯುನ್ನತ ಶ್ರೇಣಿಯಲ್ಲಿ 02. ಪ್ರಥಮ ಶ್ರೇಣಿಯಲ್ಲಿ 08.ದ್ವೀತಿಯ ಶ್ರೇಣಿಯಲ್ಲಿ 01. ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶಾಲೆಗೆ ಕೀರ್ತಿ ತಂದಿದ್ದಾರೆ.

ದಾರದಹಳ್ಳಿ ಗ್ರಾಮದ ರತಿಶ್ ಪ್ರತಿಮಾ ದಂಪತಿಯ ಪುತ್ರ ಪ್ರೀತಮ್ ಡಿ. ಆರ್. ಹಾಗೂ ಬಣಕಲ್ ಹೊಸಳ್ಳಿ ಗ್ರಾಮದ ಕುಮಾರಯ್ಯ, ರತ್ನಮ್ಮ ದಂಪತಿಯ ಪುತ್ರ ಆಕಾಶ್. ಹೆಚ್.ಕೆ. 550 ಅಂಕ ಪಡೆದು ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ. ಕೆಸವಳಲು ಗ್ರಾಮದ ಶೇಷಯ್ಯ, ಶಕುಂತಲಾ ದಂಪತಿಯ ಪುತ್ರಿ ಸಿಂಚನ ಎಸ್.531 ಅಂಕ ಪಡೆದು ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಹಾಗೂ ದಾರದಹಳ್ಳಿ ಗ್ರಾಮದ ಮುದ್ದಪ್ಪ, ಸುಜಾತ ದಂಪತಿಯ ಪುತ್ರಿ ಸಿಂಚನ ಡಿ ಎಸ್.516 ಅಂಕ ಪಡೆದು ತೃತೀಯ ಸ್ಥಾನ ಪಡೆದಿರುತ್ತಾರೆ.

ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮುಖ್ಯೋಪಾಧ್ಯಯರು, ಶಿಕ್ಷಕ ವೃಂದ, ಎಸ್.ಡಿ.ಎಂ.ಸಿ.ಆಡಳಿತ ಮಂಡಳಿ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬ್ರಿಜೇಶ್ ಕಡಿದಾಳ್ ಹಾಗೂ ಸದಸ್ಯರುಗಳು ಅಭಿನಂದನೆ ಸಲ್ಲಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.